ADVERTISEMENT

ತರೀಕೆರೆ ತಾಲ್ಲೂಕಿನಲ್ಲಿ ಕಾಡಾನೆ ದಾಳಿ: ಬೆಳೆ ಕಾಯಲು ಹೋಗಿದ್ದ ರೈತ ಸಾವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 8:36 IST
Last Updated 25 ಡಿಸೆಂಬರ್ 2022, 8:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಕಾಡಂಚಿನ ಗ್ರಾಮ ರಾಗಿಬಸವನಹಳ್ಳಿಯಜಮೀನಿನಲ್ಲಿ ಕಾಡಾನೆ ತಿವಿದು ರೈತ ಈರಪ್ಪ (65) ಸಾವಿಗೀಡಾಗಿದ್ದಾರೆ.

ಈರಪ್ಪ ಅವರು ಬೆಳೆ ಕಾಯಲು ಹೋಗಿದ್ದಾಗ ಶನಿವಾರ ತಡರಾತ್ರಿ ಅವಘಡ ಸಂಭವಿಸಿದೆ. ಹೊಲಕ್ಕೆ ನುಗ್ಗಿದ ಕಾಡಾನೆ ಗುಡಿಸಲಿಗೆ ದಾಳಿ ಮಾಡಿ ಅವರನ್ನು ಸಾಯಿಸಿದೆ. ಅಡಿಕೆ ಗಿಡ, ರಾಗಿ ಬೆಳೆಯನ್ನು ಹಾನಿ ಮಾಡಿದೆ.

ರೈತ ಈರಪ್ಪ

'ಹೊಲದಲ್ಲಿ ಕಾಡಾನೆ ರೈತನನ್ನು ಸಾಯಿಸಿ, ಗುಡಿಸಲು ಕೆಡವಿದೆ. ಹೊಲದಲ್ಲಿ ಆನೆ ಲದ್ದಿಇಟ್ಟಿದೆ. ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದಾರೆ' ಎಂದು ಹಾದಿಕೆರೆಯ ಗ್ರಾಮಸ್ಥಮಂಜುನಾಥ್ ತಿಳಿಸಿದರು.

ADVERTISEMENT

'ಸಾವಿಗೀಡಾದ ಈರಪ್ಪ ಅವರ ಕುಟುಂಬಕ್ಕೆ ಈಗ ₹ 5 ಲಕ್ಷ ಪರಿಹಾರ ನೀಡುತ್ತೇವೆ.ಇಲಾಖೆಯಿಂದ ಒಟ್ಟು ₹ 15 ಲಕ್ಷ ಪರಿಹಾರ ಸಿಗಲಿದೆ' ಎಂದು ಭದ್ರಾವತಿ ಅರಣ್ಯವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಶಿವಶರಣಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.

ಮರಣೋತ್ತರ ಪರೀಕ್ಷೆ ನಡೆದಿದೆ. ಕುಟುಂದವರಿಗೆ ಶವ ಒಪ್ಪಿಸಲಾಗಿದೆ. ಈರಪ್ಪ ಅವರಿಗೆ ಪತ್ನಿ, ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.