ADVERTISEMENT

ರೈತರಿಗೆ 3 ರೂಪಾಯಿ ಚೆಕ್ ಕೊಟ್ಟು ಅವಮಾನಿಸಿದ ಕೇಂದ್ರ ಸರ್ಕಾರ:ರವೀಶ್ ಕ್ಯಾತನಬೀಡು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:04 IST
Last Updated 6 ನವೆಂಬರ್ 2025, 6:04 IST
<div class="paragraphs"><p>ರವೀಶ್ ಕ್ಯಾತನಬೀಡು</p></div>

ರವೀಶ್ ಕ್ಯಾತನಬೀಡು

   

ಚಿಕ್ಕಮಗಳೂರು: ಪ್ರಧಾನಮಂತ್ರಿ ಪಸಲ್ ಭೀಮ ಯೋಜನೆ ಅಡಿ ಮಹಾರಾಷ್ಟ್ರದ ರೈತರಿಗೆ ಕೇಂದ್ರ ಸರ್ಕಾರ ₹3, ₹2.30 ಪರಿಹಾರ ನೀಡಿದ್ದು, ಆ ಮೂಲಕ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಟೀಕಿಸಿದರು.

ರೈತರಿಗೆ ಇಷ್ಟು ಕಡಿಮೆ ಪರಿಹಾರ ನೀಡಲಾಗಿದೆ. ಈ ಘಟನೆ ಬಗ್ಗೆ ಪ್ರಧಾನ ಮಂತ್ರಿಯಾಗಲಿ, ಬಿಜೆಪಿ ನಾಯಕರಾಗಲಿ ಮಾತನಾಡುತ್ತಿಲ್ಲ. ಇದು ನಕಲಿ ದೇಶ ಭಕ್ತಿಯನ್ನು ಸಾರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ  ಬುಧವಾರ ಹೇಳಿದರು.

ADVERTISEMENT

ಅತಿವೃಷ್ಟಿ ಸಂಕಷ್ಟದಲ್ಲಿ ಇರುವ ರೈತರಿಗೆ ಬಿಜೆಪಿ ದೀಪಾವಳಿಯ ಉಡುಗೊರೆಯಾಗಿ ಇಂತಹ ದ್ರೋಹ ಬಗೆದಿದೆ. ₹3 ಪರಿಹಾರ ಚೆಕ್‌ ನೀಡುವಾಗ ನಕಲಿ ದೇಶ ಭಕ್ತರು ಎಲ್ಲಿದ್ದರು. ಈ ಹಿಂದೆ ಇದೇ ರೈತರು ನಡೆಸಿದ ಹೋರಾಟ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತು. ದೆಹಲಿಯಲ್ಲಿ ಮುಳ್ಳುತಂತಿ, ತಡೆಗೋಡೆ, ಜಲಫಿರಂಗಿಗಳನ್ನು ಉಪಯೋಗಿಸಿತ್ತು. ಇದ್ದನ್ನು ರೈತರು ಇನ್ನೂ ಮರೆತಿಲ್ಲ ಎಂದರು.

ಹೋರಾಟದಲ್ಲಿ ಮಡಿದ ರೈತರಿಗೆ ಒಂದು ಸಾಂತ್ವನದ ಮಾತು ಹೇಳಿದ ಪ್ರಧಾನಿ ನಡೆ ಜನ ವಿರೋಧಿ ಮತ್ತು ರೈತ ವಿರೋಧಿಯಾಗಿದೆ. ಪ್ರತಿ ಮಾತಿನಲ್ಲೂ ದೇಶಭಕ್ತಿ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್‌ ಮುಖಂಡರು ಕೂಡ ಮಾತನಾಡಿಲ್ಲ. ಇದನ್ನು ಕಂಡರೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ರೈತ ವಿರೋಧಿಗಳು ಎಂದು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಧಾರ್ಮಿಕ ಅಸಹನೆ ಉಂಟುಮಾಡುತ್ತಿವೆ. ಸಂವಿಧಾನದ ಪ್ರಕಾರ ಭಾರತದ ಎಲ್ಲಾ ಸಂಘಟನೆಗಳು ನೋಂದಾಯಿಸಿಕೊಂಡು ಲೆಕ್ಕಪತ್ರಗಳನ್ನು ಜನರ ಮುಂದಿಡಬೇಕು. ಹಿಂದುಳಿದರವ, ರೈತರ, ಕಾರ್ಮಿಕರ ಮತ್ತು ದಲಿತರ ನೋವು ಆರ್‌ಎಸ್‌ಎಸ್,  ಬಿಜೆಪಿಗೆ ಬೇಕಿಲ್ಲ. ಭಾವನಾತ್ಮಕವಾಗಿ ಸಮಾಜ ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ಖಂಡನೀಯ ಎಂದರು.

ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಮುತ್ತಾಕಿ ದೆಹಲಿ ಭೇಟಿ ಸಂದರ್ಭದಲ್ಲಿ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿಚಾರ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಗವಾಯಿ ಅವರ ಮೇಲೆ ಚಪ್ಪಲಿ ಎಸೆತ ಘಟನೆಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಏಕೆ  ಖಂಡಿಸಲಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ತನೂಜ್‌ಕುಮಾರ್, ರೋಬಿನ್ ಮೋಸಸ್, ಚಂದ್ರಶೇಖರ್, ಶಾಂತಕುಮಾರ್, ವಿಜಯಕುಮಾರ್, ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.