ADVERTISEMENT

ಮಾತೆ ಮರಿಯಮ್ಮನವರ ಆದರ್ಶ ನಮಗೆ ಪ್ರೇರಣೆಯಾಗಲಿ: ಫಾ. ಎಲಿಯಾಸ್ ಸಿಕ್ವೇರಾ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:02 IST
Last Updated 16 ಫೆಬ್ರುವರಿ 2026, 4:02 IST
ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಾಲಿಕ ಮರಿಯಾ ಚರ್ಚ್‌ನ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು
ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಾಲಿಕ ಮರಿಯಾ ಚರ್ಚ್‌ನ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು   

ಮೂಡಿಗೆರೆ: ‘ಯೇಸುಕ್ರಿಸ್ತರ ತಾಯಿ ಮಾತೆ ಮರಿಯಮ್ಮ ಪರಿಪೂರ್ಣ ಸ್ವೀಕಾರದ ತಾಯಿಯಾಗಿದ್ದು, ಅವರ ಆದರ್ಶವು ನಮಗೆ ಪ್ರೇರಣೆಯಾಗಿದೆ’ ಎಂದು ಚಿಕ್ಕಮಗಳೂರು ಚರ್ಚ್‌ನ ಧರ್ಮಗುರು ಫಾ. ಎಲಿಯಾಸ್ ಸಿಕ್ವೇರಾ ಹೇಳಿದರು.

ತಾಲ್ಲೂಕಿನ ಬಣಕಲ್ ಗ್ರಾಮದಲ್ಲಿರುವ ಬಾಲಿಕಾ ಮರಿಯ ಚರ್ಚ್ ವಾರ್ಷಿಕೋತ್ಸವದ ಬಲಿಪೂಜೆ ಅರ್ಪಿಸಿ ಅವರು ಮಾತನಾಡಿದರು.

‘ಮರಿಯಮ್ಮನವರು ಕುಟುಂಬದಲ್ಲಿ ಪ್ರೀತಿ, ಐಕ್ಯತೆ ಹಾಗೂ ಸಾಮರಸ್ಯದ ಸಂಕೇತವಾಗಿದ್ದಾರೆ. ಕ್ರೈಸ್ತರಿಗೆ ನಿಷ್ಕಳಂಕ ಮಾತೆಯಾಗಿ ಕುಟುಂಬದಲ್ಲಿ ಏಕತೆ, ಸಹಬಾಳ್ವೆ ನಡೆಸಲು ಪ್ರೇರಣೆ ನೀಡಿದ್ದಾರೆ. ಅವರ ಆದರ್ಶ ಗುಣಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಸಂಸ್ಕಾರಯುತ ವ್ಯಕ್ತಿಯಾಗಿ ಬಾಳಬೇಕು’ ಎಂದರು.

ADVERTISEMENT

ಬಣಕಲ್ ಚರ್ಚ್‌ನ ಧರ್ಮಗುರು ಫಾ. ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ, ‘ಪ್ರಕೃತಿ ತಾಯಿಯನ್ನು ಪ್ರೀತಿಸಿ ಆರಾಧಿಸಿದಂತೆ ಮಾತೆ ಮರಿಯಮ್ಮನವರನ್ನು ಗೌರವಿಸಬೇಕು. ಕುಟುಂಬದಲ್ಲಿ ತಾಯಿಗಿಂತ ಮಿಗಿಲಾದ ಸ್ಥಾನವಿಲ್ಲ. ತಾಯಿಯ ಮಮತೆ ದೇವರ ಕರುಣೆಯ ಪ್ರತಿಬಿಂಬವಾಗಿದೆ’ ಎಂದರು.

ಪೂಜೆಯ ಬಳಿಕ ಚರ್ಚ್ ಪ್ರತಿಕೃತಿಯ ಅಲಂಕೃತವಾದ ತೇರಿನಲ್ಲಿ ಮರಿಯಮ್ಮನವರ ಪ್ರತಿಮೆ ಇರಿಸಿ, ಬಣಕಲ್ ಪಟ್ಟಣದಲ್ಲಿ ಕ್ರೈಸ್ತ ಸಮುದಾಯದವರು ಮೇಣದ ಬತ್ತಿ ಹಿಡಿದು, ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ವಿವಿಧ ಚರ್ಚ್‌ಗಳ 25ಕ್ಕೂ ಅಧಿಕ ಧರ್ಮಗುರುಗಳು ಭಾಗವಹಿಸಿದ್ದರು.

ಬಣಕಲ್ ಚರ್ಚ್‌ನ ಸಹಾಯಕ ಗುರು ಫಾ. ಥಾಮಸ್ ಕಲಘಟಗಿ, ಫಾ. ಅರುಣ್ ಲೋಬೊ, ಬಾಳೆಹೊನ್ನೂರು ವಲಯ ಗುರು ಫಾ. ಪೌಲ್ ಡಿಸೋಜ, ಫಾ. ಲ್ಯಾನ್ಸಿ ಪಿಂಟೊ, ಫಾ. ವಿಲಿಯಂ ಬರ್ನಾರ್ಡ್, ಫಾ. ಸುನಿಲ್ ರೊಡ್ರಿಗಸ್, ಸಿಸ್ಟರ್ ಹಿಲ್ಡಾ ಲೋಬೊ, ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹರ್ಷ ಮೆಲ್ವಿನ್ ಲಸ್ರಾದೊ, ಪೆಡ್ಡಿ ಲೋಬೊ, ಪಾಲನಾ ಸಮಿತಿಯ ಮರೀನಾ ಡೇಸಾ, ಪ್ರೆಸಿಲ್ಲಾ ಮೋನಿಸ್, ಬೆನಡಿಕ್ಟ್ ಲೋಬೊ, ಪ್ರವೀಣ್, ಪ್ರೀಡನ್ ಡಿಸೋಜ, ಸಂತೋಷ್ ಸೆರಾವೊ, ರೋನಿ ಮೋನಿಸ್, ಸ್ಟ್ಯಾನಿ ಡಿಸೋಜ, ಜೀವನ್ ಕರ್ನೇಲಿಯೊ, ಆಲ್ವಿನ್ ರೊಡ್ರಿಗಸ್, ಸಂದೀಪ್ ಡಿಸೋಜ, ಫ್ರಾನ್ಸಿಸ್ ಲೋಬೊ, ಸಂತೋಷ್ ಮೋನಿಸ್, ನವೀನ್ ಡಿಸೋಜ, ವಿಕ್ಟರ್ ಮಾರ್ಟಿಸ್, ಅರುಣ್ ಡಿಕುನ್ನಾ, ಲವೀನ್ ಡಿಸೋಜ, ಆಲ್ವಿನ್ ಡಿಸೋಜ, ರೊನಾಲ್ಡ್ ಡಿಸೋಜ, ಪ್ರವೀಣ್ ಪಾಯ್ಸ್, ವಿನ್ಸೆಂಟ್ ಡಿಸೋಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.