ADVERTISEMENT

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:21 IST
Last Updated 31 ಜನವರಿ 2026, 7:21 IST
   

ಮೂಡಿಗೆರೆ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಆಡಳಿತದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಅದರಂತೆ ಸುಂಕಸಾಲೆ, ಜಾವಳಿ ಗ್ರಾಮ ಪಂಚಾಯಿತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಮೂಡಿಗೆರೆ. ಬಾಳೂರು, ನಿಡುವಾಳೆ ಗ್ರಾಮ ಪಂಚಾಯಿತಿಗೆ ಸಮಾಜ ಕಲ್ಯಾಣಾಧಿಕಾರಿ ಗ್ರೇಡ್ 2, ಸಮಾಜ ಕಲ್ಯಾಣ ಇಲಾಖೆ ಮೂಡಿಗೆರೆ. ಕೂವೆ, ಕುಂದೂರು ಗ್ರಾಮ ಪಂಚಾಯಿತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೆಸ್ಕಾಂ ಇಲಾಖೆ ಮೂಡಿಗೆರೆ.

ಬಿ. ಹೊಸಳ್ಳಿ, ತರುವೆ ಗ್ರಾಮ ಪಂಚಾಯಿತಿಗೆ ಸಹಾಯಕ ತೋಟಗಾರಿಕಾ ಅಧಿಕಾರಿ, ತೋಟಗಾರಿಕೆ ಇಲಾಖೆ ಮೂಡಿಗೆರೆ. ಬಣಕಲ್, ಫಲ್ಗುಣಿ ಗ್ರಾಮ ಪಂಚಾಯಿತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಎಂಜಿನಿಯರಿಂಗ್ ಉಪ ವಿಭಾಗ ಮೂಡಿಗೆರೆ.

ADVERTISEMENT

ತ್ರಿಪುರ, ಬೆಟ್ಟಗೆರೆ ಗ್ರಾಮ ಪಂಚಾಯಿತಿಗೆ ಸಹಾಯಕ ತೋಟಗಾರಿಕಾ ಅಧಿಕಾರಿ, ತೋಟಗಾರಿಕೆ ಇಲಾಖೆ ಮೂಡಿಗೆರೆ. ಬಿದರಹಳ್ಳಿ, ದಾರದಹಳ್ಳಿ ಗ್ರಾಮ ಪಂಚಾಯಿತಿಗೆ ಸಹಾಯಕ ತೋಟಗಾರಿಕಾ ನಿರ್ದೇಶಕರು, ಬೀಜುವಳ್ಳಿ ತೋಟಗಾರಿಕಾ ಕ್ಷೇತ್ರ ಮೂಡಿಗೆರೆ. ಹೆಸ್ಗಲ್ ಗ್ರಾಮ ಪಂಚಾಯಿತಿಗೆ ಸಹಾಯಕ ತೋಟಗಾರಿಕಾ ಅಧಿಕಾರಿ, ತೋಟಗಾರಿಕೆ ಇಲಾಖೆ ಮೂಡಿಗೆರೆ. ಹಳೇಮೂಡಿಗೆರೆ ಗ್ರಾಮ ಪಂಚಾಯಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡಿಗೆರೆ. ನಂದೀಪುರ, ಮಾಕೋನಹಳ್ಳಿ ಗ್ರಾಮ ಪಂಚಾಯಿತಿಗೆ ವಲಯ ಅರಣ್ಯಾಧಿಕಾರಿ, ಮೂಡಿಗೆರೆ ವಲಯ ಮೂಡಿಗೆರೆ.

ಚಿನ್ನಿಗಾ, ಗೋಣಿಬೀಡು ಗ್ರಾಮ ಪಂಚಾಯಿತಿಗೆ ಸಹಾಯಕ ಎಂಜಿನಿಯರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ (ಗ್ರಾಮೀಣ ಕುಡಿಯುವ ನೀರು ವಿಭಾಗ) ಮೂಡಿಗೆರೆ. ಕಿರುಗುಂದ ಹಂತೂರು ಗ್ರಾಮ ಪಂಚಾಯಿತಿಗೆ ಸಹಾಯಕ ತೋಟಗಾರಿಕಾ ನಿರ್ದೇಶಕರು, ಬೀಜುವಳ್ಳಿ ತೋಟಗಾರಿಕಾ ಕ್ಷೇತ್ರ ಮೂಡಿಗೆರೆ. ಊರುಬಗೆ ಗ್ರಾಮ ಪಂಚಾಯಿತಿಗೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ತೋಟಗಾರಿಕೆ ಇಲಾಖೆ ಮೂಡಿಗೆರೆ ಇವರನ್ನು ನೇಮಿಸಿ ಆದೇಶಿಸಲಾಗಿದ್ದು, ಆಯಾ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯವಾದ ದಿನದಿಂದ ಪ್ರಾರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.