ADVERTISEMENT

ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ದತ್ತ

ಶ್ರವಣದೋಷ ಚೇತನರ ಚೆಸ್ ಚಾಂಪಿಯನ್ ಸ್ಪರ್ಧೆಯ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:17 IST
Last Updated 26 ಜುಲೈ 2022, 6:17 IST
ಕಡೂರಿನಲ್ಲಿ ನಡೆದ ಶ್ರವಣದೋಷ ಹೊಂದಿದವರ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಸ್ಪರ್ಧೆಯಲ್ಲಿ ವಿಜೇತರಿಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಬಹುಮಾನ ವಿತರಿಸಿದರು. ಭಂಡಾರಿ ಶ್ರೀನಿವಾಸ್, ಕೆ.ಎಚ್. ಶಂಕರ್, ಶರತ್‌ ಕೃಷ್ಣಮೂರ್ತಿ, ಕೆ.ಎಂ.ವಿನಾಯಕ್, ಮೋಹನ್‌ ಕುಮಾರ್, ಮರುಗುದ್ದಿ ಮನು ಇದ್ದರು.
ಕಡೂರಿನಲ್ಲಿ ನಡೆದ ಶ್ರವಣದೋಷ ಹೊಂದಿದವರ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಸ್ಪರ್ಧೆಯಲ್ಲಿ ವಿಜೇತರಿಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಬಹುಮಾನ ವಿತರಿಸಿದರು. ಭಂಡಾರಿ ಶ್ರೀನಿವಾಸ್, ಕೆ.ಎಚ್. ಶಂಕರ್, ಶರತ್‌ ಕೃಷ್ಣಮೂರ್ತಿ, ಕೆ.ಎಂ.ವಿನಾಯಕ್, ಮೋಹನ್‌ ಕುಮಾರ್, ಮರುಗುದ್ದಿ ಮನು ಇದ್ದರು.   

ಕಡೂರು: ‘ಶ್ರವಣದೋಷ ಉಳ್ಳವರಿಗೆ ಅನುಕಂಪ ತೋರುವ ಬದಲು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು.

ಕಡೂರಿನಲ್ಲಿ ಭಾನುವಾರ ಜಿಲ್ಲಾ ಕಿವುಡರ ಸಂಘ, ಕರ್ನಾಟಕ ಕಿವುಡರ ಒಕ್ಕೂಟದ ಸಹಯೋಗದಲ್ಲಿ 17ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಶ್ರವಣದೋಷ ಉಳ್ಳವರ ರಾಜ್ಯಮಟ್ಟದ ಎರಡು ದಿನಗಳ ಚೆಸ್ ಟೂರ್ನಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉದ್ಯೋಗ ಪಡೆದುಕೊಳ್ಳಲು ಪ್ರತ್ಯೇಕವಾಗಿ ಮೀಸಲಾತಿ ಕಲ್ಪಿಸುವಂತೆ ಶ್ರವಣದೋಷ ಹೊಂದಿರುವರು ಹಲವು ಹೋರಾಟಗಳನ್ನು ನಡೆಸುತ್ತಿದ್ದರೂ ಇದುವರೆಗೆ ಅವರ ಬೇಡಿಕೆಗಳು ಈಡೇರದಿರುವುದು ದುರದೃಷ್ಟಕರ. ಸರ್ಕಾರ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಿದಂತೆ ಶ್ರವಣದೋಷ ವುಳ್ಳ ಯುವಕ- ಯುವತಿಯರಿಗೂ ಪ್ರೋತ್ಸಾಹ ನೀಡಲು ಚಿಂತನೆ ನಡೆಸಬೇಕಿದೆ. ಈ ಹಿಂದೆ ಕಿವುಡ ಮತ್ತು ಮೂಗರ ಸಂಘಟನೆ ಬೆಂಗಳೂರಿನಲ್ಲಿ ನಡೆಸಿದ್ದ ಪ್ರತಿಭಟನೆಯಲ್ಲಿ ನಾನೂ ಭಾಗವಹಿಸಿದ್ದೆ. ಅವರ ಸಮಸ್ಯೆಗಳೇನಿ ದ್ದರೂ ತಮ್ಮ ಇತಿಮಿತಿಯಲ್ಲಿ ಸಹಕಾರ ನೀಡಲು ಸಿದ್ಧ’ ಎಂದರು.

ADVERTISEMENT

ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪುರಸಭೆಯ ವತಿಯಿಂದ ವಿಶೇಷಚೇತನರಿಗೆ ದೊರಕಬಹುದಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಕಾರ್ಯ ಗಳನ್ನು ಮಾಡಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್‌ ಕೃಷ್ಣಮೂರ್ತಿ, ಮುಖಂಡ ಕೆ.ಎಂ.ವಿನಾಯಕ್, ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವಾಧ್ಯಕ್ಷ ಕೆ.ಎಚ್. ಶಂಕರ್, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಮರುಗುದ್ದಿ ಮನು, ಸೈಯದ್ ಯಾಸೀನ್, ರೇಣುಕಪ್ಪ, ಚಿನ್ನರಾಜು, ಚಂದ್ರಪ್ಪ, ಶನವಾಜ್, ಸುನೀಲ್, ದೇವರಾಜ್, ನವೀನ್, ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.