ಕಡೂರು: ಪಟ್ಟಣದ ಛತ್ರದ ಬೀದಿಯಲ್ಲಿನ ಕೆಂಚಾಂಬ ದೇವಾಲಯದ ಬಳಿಯಲ್ಲಿ ಶ್ರೀದುರ್ಗಾ ಸೇವಾ ಸಮಿತಿ ವತಿಯಿಂದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಸೆ.22ರಿಂದ ಅ.2ರವರೆಗೆ ‘ಕಡೂರು ದಸರಾ’ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಆಚರಣೆಯು ಸಮಿತಿಯ ಮೂರನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವವಾಗಿದೆ. ಸೆ.22ರಂದು ಗಣಹೋಮ, ಗೋ ಪೂಜೆ, ದೇವೀಪೂಜೆ, ಕಲಶ ಪ್ರತಿಷ್ಠಾಪನೆ ನಡೆಯಲಿದೆ. ಸೆ.23ರಂದು ಪುಷ್ಪಾರ್ಚನೆ, 26ರಂದು ಮಹಿಳೆಯರಿಂದ ಸಹಸ್ರ ಕುಂಕುಮಾರ್ಚನೆ, 28ರಂದು ದೀಪೋತ್ಸವ, 30ರಂದು ಚಂಡಿಕಾಹೋಮ ನಡೆಯಲಿದೆ.
ಕುಂಕುಮಾರ್ಚನೆಯಂದು ಮಹಿಳೆಯರಿಗೆ ಸಮಿತಿ ವತಿಯಿಂದ ಬಾಗಿನ ನೀಡಲಾಗುವುದು. ದೇವಿಯ ಸೇವಾಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.
ಭದ್ರಸ್ವಾಮಿ, ಕೆ.ಪಿ.ಶ್ರೀನಿವಾಸ್, ಕೆ.ಸಿ.ವಿಕಾಸ್‌ಚಂದ್ರು, ಚೇತನ್, ಹಳೇಪೇಟೆ ರಂಗನಾಥ್, ರಘು, ಪುರಸಭೆ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ, ಎಚ್.ಆರ್.ದೇವರಾಜ್, ನಾಗೇಂದ್ರಅಗ್ನಿ, ತರುಣ್, ಮಂಜುನಾಥ್, ಶ್ರೇಯಸ್, ನರಸಿಂಹ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.