ADVERTISEMENT

ಕಳಸ ಪದವಿ ಪೂರ್ವ ಕಾಲೇಜಿಗೆ ಶೇ 92 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:44 IST
Last Updated 8 ಏಪ್ರಿಲ್ 2025, 13:44 IST
<div class="paragraphs"><p>ಫಲಿತಾಂಶ ಪರಿಶೀಲನೆ</p></div>

ಫಲಿತಾಂಶ ಪರಿಶೀಲನೆ

   

ಸಂಗ್ರಹ ಚಿತ್ರ

ಕಳಸ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 92 ಫಲಿತಾಂಶ ಲಭಿಸಿದೆ.

ADVERTISEMENT

ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ 112 ವಿದ್ಯಾರ್ಥಿಗಳ ಪೈಕಿ 103 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 10 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 63 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 

ಕಲಾ ವಿಭಾಗ: 53 ವಿದ್ಯಾರ್ಥಿಗಳ ಪೈಕಿ 51 ವಿದ್ಯಾರ್ಥಿಗಳು ತೇರ್ಗಡೆ. ವಾಣಿಜ್ಯ ವಿಭಾಗ: 45 ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳು ಉತ್ತೀರ್ಣ. ವಿಜ್ಞಾನ ವಿಭಾಗ: 14 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶ್ರದ್ಧಾ 562 ಅಂಕ, ಸೌಜನ್ಯ (562), ಅಂಜಲಿ (560), ನಮ್ರತಾ (543), ಸುವರ್ಣ (541) ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜುಲೈಕಾ ಫಿಜಾ (532) ಮತ್ತು ಕಲಾ ವಿಭಾಗದಲ್ಲಿ ದೀಕ್ಷಿತಾ (511) ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.