ಕಳಸ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ರಾಮಮಂದಿರ ನಿರ್ಮಾಣದ ಭೂಮಿಪೂಜೆಯಲ್ಲಿ ಬಳಸಲು ಪುಣ್ಯ ಕ್ಷೇತ್ರಗಳಾದ ಕಳಸ ಮತ್ತು ಹೊರನಾಡಿನ ಮಣ್ಣನ್ನು ಕಳುಹಿಸಲಾಯಿತು.
ಹೊರನಾಡಿನ ಅನ್ನಪೂರ್ಣೇಶ್ವರಿಯ ಮಹಾಮಂಗಳಾರತಿ ಸಂದರ್ಭದಲ್ಲಿ ಆ ಗ್ರಾಮದ ಮಣ್ಣನ್ನು ಇರಿಸಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗಿತ್ತು. ಆ ನಂತರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪ್ರಭು ಅವರು ಹೊರನಾಡಿನ ಜಿ.ಭೀಮೇಶ್ವರ ಜೋಷಿ ಅವರಿಂದ ಮಣ್ಣನ್ನು ಸ್ವೀಕರಿಸಿದರು.
ರಾಜಲಕ್ಷ್ಮಿ ಜೋಷಿ, ರಮೇಶ್ ಗೊರಸುಕುಡಿಗೆ, ಪ್ರಕಾಶ್ ಕಾರಗದ್ದೆ, ಬಜರಂಗ ದಳದ ಅಜಿತ್, ಚೇತನ್, ಸುದೀಪ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.