ಆಲ್ದೂರು: ಎರಡು ದಿನಗಳಿಂದ ಆಲ್ದೂರು ಹೋಬಳಿಯ ಹಲಸಿಗೆ, ತೋರಣ ಮಾವು, ಕಠಾರದಳ್ಳಿ, ಗುಡ್ಡದೂರು, ಹೊಸಳ್ಳಿ, ಆಲ್ದೂರು, ಬನ್ನೂರು, ಗುಲ್ಲನ್ ಪೇಟೆಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ.
ಯಲಗುಡಿಗೆ ಅರವಿಂದ್ ಬಿ.ಎಂ. ಮಾತನಾಡಿ ಆಲ್ದೂರು ಹೋಬಳಿಗೆ ಇದುವರೆಗೆ 114 ಸೆಂ.ಮೀ ಮಳೆಯಾಗಿದ್ದು, ಮಳೆಯ ಅಬ್ಬರ ಇನ್ನೂ ಕೆಲವು ದಿನ ಇರುವುದರಿಂದ ಶಾಲೆ, ಕಾಲೇಜಿಗೆ ಜಿಲ್ಲಾಧಿಕಾರಿ ರಜೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಫಿ ಬೆಳೆಗಾರ ರವಿಕುಮಾರ್ ಎಚ್.ಎಲ್. ಮಾತನಾಡಿ, ಪುಷ್ಯ ಮಳೆ ಇದಾಗಿದ್ದು, ಈ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಳು ಮೆಣಸು ಬೆಳೆಗಾರರಿಗೆ ಅನುಕೂಲ ಆಗಲಿದೆ. ಕಾಫಿ ಗಿಡಗಳಲ್ಲಿ ಬೋರರ್ ಕಾಯಿಲೆ ಕಾಣಿಸಿಕೊಳ್ಳುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.