ADVERTISEMENT

ನರಸಿಂಹರಾಜಪುರ: ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:24 IST
Last Updated 20 ಮೇ 2025, 14:24 IST
ನರಸಿಂಹರಾಜಪುರದಲ್ಲಿ ಮಂಗಳವಾರ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ಮೆರವಣಿಗೆಯಲ್ಲಿ ಗ್ರಾಮದೇವತೆಗಳು ಪಾಲ್ಗೊಂಡಿದ್ದವು
ನರಸಿಂಹರಾಜಪುರದಲ್ಲಿ ಮಂಗಳವಾರ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ಮೆರವಣಿಗೆಯಲ್ಲಿ ಗ್ರಾಮದೇವತೆಗಳು ಪಾಲ್ಗೊಂಡಿದ್ದವು   

ನರಸಿಂಹರಾಜಪುರ: ಪಟ್ಟಣದ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.  ಗ್ರಾಮ ದೇವತೆಗಳಾದ ಹಳೇಪೇಟೆ ಗುತ್ತ್ಯಮ್ಮ, ಮೇದರ ಬೀದಿ ಅಂತರಘಟ್ಟಮ್ಮ ಹಾಗೂ ಮಡಬೂರು ದಾನಿವಾಸ ದುರ್ಗಾಂಬ ದೇವತೆಗಳೊಂದಿಗೆ ಮೆರವಣಿಗೆಯೊಂದಿಗೆ ದೇವಿಯನ್ನು ಸುಂಕದಕಟ್ಟೆ ಬಳಿಯಿರುವ ಮಾರಿಯಮ್ಮನ ಗದ್ದಿಗೆ ತೆರಳಲಾಯಿತು.

ಎತ್ತೈಗೆದ ಮರದಲ್ಲಿ ಕೆತ್ತರಿವ ಮಾರಿಯಮ್ಮ ದೇವಿಗೆ ದೃಷ್ಟಿ ಇಡುವ ಕಾರ್ಯಕ್ರಮ ನಡೆಯಿತು. ವಿಗ್ರಹ ಕೆತ್ತಿದ ಮೈಲಾರ ಆಚಾರ್ಯ ಅವರು ಪೂಜಾ ವಿಧಿಗಳನ್ನು ನೆರವೇರಿಸಿ, ದೇವಿಗೆ ದೃಷ್ಟಿಬೊಟ್ಟು ಇಟ್ಟ ಕೂಡಲೇ ಸಮೀಪದಲ್ಲಿದ್ದ ಹುಲ್ಲಿನ ರಾಶಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಭಕ್ತರು ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸಿದರು. ಮಾರಿಕಾಂಬ ದೇವಿಯನ್ನು ಗ್ರಾಮ ದೇವತೆಗಳೊಂದಿಗೆ ಮೆರವಣಿಗೆಯಲ್ಲಿ ಅಗ್ರಹಾರದ ಉಮಾಮಹೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಮಾರಿ ಗದ್ದುಗೆಗೆ ತಂದು ಪ್ರತಿಷ್ಠಾಪಿಸಲಾಯಿತು.ಮಹಿಳೆಯರು ದೇವಿಗೆಗೆ ಪೂಜೆ, ಹರಕೆ, ಕಾಣಿಕೆ ಬಾಗಿನ ಅರ್ಪಿಸಿದರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಭಾಗವಹಿಸಿದ್ದರು. ಸಂಜೆ ಸುಧಿ ಬಳಗದಿಂದ ಸ್ವರನಾದ ಸಂಗೀತ ವೈಭವ ಕಾರ್ಯಕ್ರಮ ನಡೆಯಿತು.  ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಕಾರ್ಯಾಧ್ಯಕ್ಷ  ಎಚ್.ಎನ್.ರವಿಶಂಕರ್, ಪ್ರಶಾಂತ್ ಎಲ್. ಶೆಟ್ಟಿ, ಪಿ.ಆರ್.ಸುಕುಮಾರ್, ಕಾರ್ಯದರ್ಶಿ ಎನ್.ಎಂ.ಕಾರ್ತಿಕ್, ಎಚ್.ಕೆ.ಸುನಿಲ್ ಕುಮಾರ್, ಸುಂಕದಕಟ್ಟೆ ಗದ್ದುಗೆ ಸಮಿತಿ ಹಾಗೂ ಅಂಬೇಡ್ಕರ್ ನಗರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.