ADVERTISEMENT

ತರೀಕೆರೆ: ‘ಎದೆಯ ಪದ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 5:00 IST
Last Updated 17 ಅಕ್ಟೋಬರ್ 2025, 5:00 IST
ತರೀಕೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಲಕ್ಷ್ಮೀದೇವಮ್ಮ ಅವರ ಆತ್ಮಕಥನ ‘ಎದೆಯ ಪದ’ ಪುಸ್ತಕವನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಬಿಡುಗಡೆಗೊಳಿಸಿದರು
ತರೀಕೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಲಕ್ಷ್ಮೀದೇವಮ್ಮ ಅವರ ಆತ್ಮಕಥನ ‘ಎದೆಯ ಪದ’ ಪುಸ್ತಕವನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಬಿಡುಗಡೆಗೊಳಿಸಿದರು   

ತರೀಕೆರೆ: ‘ಜನಪದ ಕಲಾವಿದೆ ಲಕ್ಷ್ಮೀದೇವಮ್ಮನವರ ಸಾಧನೆ ಗುರುತಿಸಿ, ಅನೇಕ ಪ್ರಶಸ್ತಿಗಳು ನೀಡಿರುವುದು ಹೆಮ್ಮೆಯ ವಿಷಯ. ಸರ್ಕಾರ ಸಾಧಕರನ್ನು ಗುರುತಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಲಕ್ಷ್ಮೀದೇವಮ್ಮ ಅವರ ಆತ್ಮಕಥನ ‘ಎದೆಯ ಪದ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಲಕ್ಷ್ಮೀದೇವಮ್ಮ ಅವರಂತ ಕಲಾವಿದರ ಆತ್ಮ ಕಥನ ಬಿಡುಗಡೆಯಾಗುತ್ತಿರುವುದು ಸಂತೋಷ ತಂದಿದೆ. ಪ್ರೊ. ಆರ್.ಸುನಂದಮ್ಮ ಪುಸ್ತಕವನ್ನು ಬಹಳ ಚೆನ್ನಾಗಿ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಬೆಂಗಳೂರು ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಪುಸ್ತಕ ಕುರಿತು ಮಾತನಾಡಿ, ‘ಲಕ್ಷ್ಮೀದೇವಮ್ಮ ಅವರ ಆತ್ಮಕಥನದಲ್ಲಿ ಬಡತನದಲ್ಲಿ ಹುಟ್ಟಿ ಬೆಳೆದ ಮಹಿಳೆ ತನ್ನ ಶ್ರಮದಿಂದ ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕವೇ ಬದುಕನ್ನು ಹೇಗೆ ಕಟ್ಟಿಕೊಂಡರು ಎಂಬುದು ತಿಳಿಸುತ್ತದೆ’ ಎಂದರು.

ಲಕ್ಷ್ಮೀದೇವಮ್ಮ ಅವರು ಭಜನಾ ಮಂಡಳಿ, ಅರುಣೋದಯ ಮಹಿಳಾ ಸಂಘ, ಗ್ರಾ.ಪಂ ಸದಸ್ಯೆ–ಅಧ್ಯಕ್ಷರಾಗಿ, ಆಕಾಶವಾಣಿ ಕಲಾವಿದರಾಗಿ, ಮಹಿಳೆಯರಿಗಾಗಿ ರಾತ್ರಿ ಶಾಲೆ ಪ್ರಾರಂಭಿಸಿ ಅನೇಕ ಮಹಿಳೆಯರಿಗೆ ವಿದ್ಯಾದಾನ ಮಾಡಿರುವ ಅವರು ಇತರರಿಗೆ ಮಾದರಿ ಎಂದರು. 

ಲೇಖಕಿ ಪ್ರೊ. ಆ‌ರ್.ಸುನಂದಮ್ಮ ಮಾತನಾಡಿ, ಲಕ್ಷ್ಮೀದೇವಮ್ಮ ಅವರ ಗ್ರಾಮೀಣ ಆದರ್ಶ ಬದುಕು ಅನೇಕ ಜನರಿಗೆ ಮಾರ್ಗಸೂಚಿಯಾಗಿದೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ಕಲಾವಿದೆ ಲಕ್ಷ್ಮೀದೇವಮ್ಮ, ಮೈಸೂರು ಸಮತಾ ಅಧ್ಯಯನ ಕೇಂದ್ರ ಅಧ್ಯಕ್ಷೆ ಸಬೀಹಾ ಭೂಮಿಗೌಡ, ಬೆಂಗಳೂರು ಲೇಖಕರು ಮತ್ತು ಚಿಂತಕಿ ದು. ಸರಸ್ವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ರವಿ ದಳವಾಯಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಪವಿತ್ರ ವೆಂಕಟೇಶ್, ಸಬಿತಾ ಬನ್ನಾಡಿ, ಕನ್ನಡಶ್ರೀ ಬಿ.ಎಸ್. ಭಗವಾನ್, ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಮ್ಮ, ಮಮತ ಮಹಿಳಾ ಸಮಾಜ ಅಧ್ಯಕ್ಷೆ ಮಂಜುಳಾ ವಿಜಯ ಕುಮಾರ್, ಕಜಾಪ ತಾಲ್ಲೂಕು ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ, ಅನುವನಹಳ್ಳಿ ಪ್ರಸನ್ನ ಕುಮಾ‌ರ್, ಕಜಾಪ ಅಧ್ಯಕ್ಷೆ ಗಾಯಿತ್ರಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.