
ತರೀಕೆರೆ: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಗೆ ಜನ್ಮದಿನದ ಶುಭಾಶಯ ಕಳುಹಿಸಿದ್ದಕ್ಕೆ ಕೋಪಗೊಂಡ ಆಕೆಯ ಸಹೋದರ ಕಿರಣ್ ಮತ್ತಿತರರು ಸೇರಿ ಪಟ್ಟಣದ ಬೈಪಾಸ್ ರಸ್ತೆ ಸಮೀಪದ ಅತ್ತಿನಾಳು ಗ್ರಾಮದ ಅಂಡರ್‌ಪಾಸ್ ಬಳಿ, ತಾಲ್ಲೂಕಿನ ಉಡೇವಾ ಗ್ರಾಮದ ಮಂಜುನಾಥ್ (21) ಎಂಬುವರನ್ನು ಬುಧವಾರ ಸಂಜೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಗಂಭೀರ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟರು.
ಕೊಲೆಯಾದ ಮಂಜುನಾಥ್ ಅವರ ಸಂಬಂಧಿ, ತಾಲ್ಲೂಕಿನ ಉಡೇವಾ ಗ್ರಾಮದ ಕೊಟೇಶ್ ಎಂ. ಅವರು ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಕಿರಣ್, ಮನು(ಮನೋಜ್) ಎಂಬುವರನ್ನು ಬಂಧಿಸಲಾಗಿದೆ.
ಎಸ್‍ಪಿ ಜಿತೇಂದ್ರ ಕುಮಾರ ದಯಾಮ, ಎಎಸ್‍ಪಿ ಸಿ.ಟಿ.ಜಯಕುಮಾರ್, ಡಿವೈಎಸ್‍ಪಿ ಪರಶುರಾಮಪ್ಪ ಮಾರ್ಗದರ್ಶನದಲ್ಲಿ ತರೀಕೆರೆ ಪೊಲೀಸ್ ಠಾಣೆಯ ಪಿ.ಐ ರಾಮಚಂದ್ರ ನಾಯಕ, ಪಿ.ಎಸ್.ಐ ನಾಗೇಂದ್ರ ನಾಯ್ಕ, ಆನಂದ್ ಪಾವಸ್ಕರ್, ಮಂಜುನಾಥ ಮನ್ನಂಗಿ, ದೇವೇಂದ್ರ ರಾಥೋಡ್, ಎ.ಎಸ್.ಐ. ರವಿ, ಸಿಬ್ಬಂದಿ ರುದ್ರೇಶ್, ಮಧು, ಧನಂಜಯ ಸ್ವಾಮಿ, ಎಚ್.ಸಿ.ಗಳಾದ ಪ್ರದೀಪ್, ರಫೀಕ್, ವೇಣುಗೋಪಾಲ್, ಪಿ.ಸಿ.ಗಳಾದ ರಿಯಾಜ್, ಕಿರಣ್ ಕುಮಾರ್, ರಾಜೇಶ, ಮೋಹನ್, ಶಿವಕುಮಾರ್, ಎ.ಎಚ್.ಸಿ. ಶ್ರೀನಿವಾಸ, ಜಿಲ್ಲಾ ಕಚೇರಿ ತಾಂತ್ರಿಕ ಸಿಬ್ಬಂದಿ ರಬ್ಬಾನಿ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.