ADVERTISEMENT

ಕಡೂರು: ದ್ರಾಕ್ಷಿಹಣ್ಣಿಗೆ ಹೆಚ್ಚಿದ ಬೇಡಿಕೆ

ಸೇಬು, ಮೋಸಂಬಿ, ಕಿತ್ತಳೆ ಹಣ್ಣು ತುಸು ದುಬಾರಿ

ಬಾಲು ಮಚ್ಚೇರಿ
Published 14 ಮಾರ್ಚ್ 2025, 7:21 IST
Last Updated 14 ಮಾರ್ಚ್ 2025, 7:21 IST
ಕಡೂರಿನಲ್ಲಿ ಭರಪೂರ ಮಾರಾಟವಾಗುತ್ತಿರುವ ದ್ರಾಕ್ಷಿ
ಕಡೂರಿನಲ್ಲಿ ಭರಪೂರ ಮಾರಾಟವಾಗುತ್ತಿರುವ ದ್ರಾಕ್ಷಿ   

ಕಡೂರು: ಬಿಸಿಲು ಹೆಚ್ಚಾಗುತ್ತಿದ್ದಂತೆ ಹಣ್ಣುಗಳ ಬೆಲೆಯೂ ಹೆಚ್ಚುತ್ತಿದೆ. ಕಡೂರು ಪಟ್ಟಣದಲ್ಲಿ ಬೀಜರಹಿತ ದ್ರಾಕ್ಷಿ ಮಾರಾಟ ಹೆಚ್ಚಿದ್ದು, ಉಳಿದ ಹಣ್ಣುಗಳ ಬೆಲೆ ಗ್ರಾಹಕರಿಗೆ ತುಸು ದುಬಾರಿಯಾಗಿದೆ.

ಬಿಸಿಲು ಕಾಲದಲ್ಲಿ ಆರಂಭವಾಗುವ ಸೀಡ್‌ಲೆಸ್ ದ್ರಾಕ್ಷಿಯನ್ನು ಪಟ್ಟಣದ ಬಹಳಷ್ಟು ಕಡೆ ಮಾರಾಟ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಸಾಂಗ್ಲಿ ಮುಂತಾದೆಡೆಯಿಂದ ದ್ರಾಕ್ಷಿ ಬರುತ್ತವೆ. ಒಂದು ಕೆ.ಜಿ. ಸೀಡ್‌ಲೆಸ್ ದ್ರಾಕ್ಷಿ ₹100ಕ್ಕೆ ಮಾರಾಟವಾಗುತ್ತಿದೆ.

ಸ್ಥಳೀಯವಾಗಿ ಕಡಿಮೆ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಬಿ.ಎಚ್.ರಸ್ತೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರ ನಡೆಯುತ್ತದೆ. ಕೆ.ಜಿ.ಗೆ ₹80-90ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ದ್ರಾಕ್ಷಿ ಹುಳಿ ಮಿಶ್ರಿತ ವಿಶಿಷ್ಟ ರುಚಿ ಹೊಂದಿದೆ. ಆದರೆ, ಗ್ರಾಹಕರು ಹೆಚ್ಚಾಗಿ ಸಿಹಿ ದ್ರಾಕ್ಷಿಯನ್ನೇ ಖರೀದಿಸುತ್ತಾರೆ. ಹಿಂದೆ ಹೆಚ್ಚು ದೊರೆಯುತ್ತಿದ್ದ ಬೀಜ ಸಹಿತ ದ್ರಾಕ್ಷಿ ಅಪರೂಪವಾಗಿದೆ.

ADVERTISEMENT

ಇತರ ಹಣ್ಣುಗಳ ಬೆಲೆ ಕಳೆದ ವಾರಕ್ಕಿಂತ ತುಸು ಹೆಚ್ಚಿದೆ. ಸೇಬು ಒಂದು ಕೆಜಿಗೆ ₹120-140, ಮೋಸಂಬಿ ₹60, ಕಿತ್ತಳೆ ₹60-70, ಕರಬೂಜ ₹30-50, ದಾಳಿಂಬೆ ₹150-180, ಸೀತಾಫಲ ₹ 150, ಏಲಕ್ಕಿ ಬಾಳೆ ₹60, ಪಚ್ಚಬಾಳೆ ₹ 35, ಸೀಬೆ ಹಣ್ಣು ₹ 60-65, ಚಿಕ್ಕು ₹100, ಪಪ್ಪಾಯಿ ₹30, ಬೆಣ್ಣೆಹಣ್ಣು ಒಂದಕ್ಕೆ ₹60 ಬೆಲೆಯಿದೆ.

‘ವ್ಯಾಪಾರ ತೃಪ್ತಿಕರ’
ಬೇಸಿಗೆಯಲ್ಲಿ ಹಣ್ಣಿನ ಬೆಲೆ ಹೆಚ್ಚಾಗುವುದು ಸಾಮಾನ್ಯ. ಪಪ್ಪಾಯ ಬಿಟ್ಟರೆ ಸ್ಥಳೀಯವಾಗಿ ಯಾವುದೇ ಹಣ್ಣು ಬೆಳೆಯುವುದಿಲ್ಲವಾದ್ದರಿಂದ ಹೊರಗಡೆಯಿಂದಲೇ ತಂದು‌ ಮಾರಾಟ ಮಾಡುತ್ತೇವೆ. ಹೀಗಾಗಿ ಹೆಚ್ಚು ಲಾಭವಿಲ್ಲದಿದ್ದರೂ ತೃಪ್ತಿಕರ ವ್ಯಾಪಾರ ನಡೆಯುತ್ತಿದೆ ಎನ್ನುತ್ತಾರೆ ಕಡೂರಿನ ಹಣ್ಣಿನ ವ್ಯಾಪಾರಿ ಹಸನ್ ಮೂಸಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.