ತರೀಕೆರೆ: ಅಜ್ಜಂಪುರ ತಾಲ್ಲೂಕು ಹಿರೇಕಾನವಂಗಲ ಗ್ರಾಮದ ಶ್ರೀರುದ್ರೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಡೆದ 14ರ ವಯೋಮಾನದ ಬಾಲಕ/ಬಾಲಕಿಯರ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಎಂ ಸಿ. ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ಮಕ್ಕಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬಾಲಕ ಮತ್ತು ಬಾಲಕಿಯರ ತಂಡ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪವನಕುಮಾರ್ ಬಾಲಕರ 600 ಮೀ. ಓಟದಲ್ಲಿ ದ್ವಿತೀಯ, ಹೈಂಪ್‌ನಲ್ಲಿ ತೃತೀಯ. ವಿಲ್ಸನ್ 400 ಮೀ. ಪ್ರಥಮ, 4x100 ಮೀ. ರಿಲೇಯಲ್ಲಿ ಪ್ರಥಮ. ಹರೀಶ್ ಜಿ.ಜೆ. ಶಾಟ್‌ಪಟ್ ಮತ್ತು ಡಿಸ್ಕಸ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಶಂಷದ್ 200 ಮೀ. ದ್ವಿತೀಯ ಮತ್ತು ಶಾಟ್‌ಪಟ್ ಮತ್ತು ಡಿಸ್ಕಸ್ ಎಸೆತದಲ್ಲಿ ಪ್ರಥಮ. ಆತ್ಮಿಕಾ 600 ಮೀ. ದ್ವಿತೀಯ, 4 x 100 ಮೀ.. ರಿಲೆ ಪ್ರಥಮ ಹಾಗೂ ಲಾಂಗ್‌ಜಂಪ್‌ನಲ್ಲಿ ವರ್ಷ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕ ಕುಮಾರಸ್ವಾಮಿ ಬಿ.ಪಿ., ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಿನುದ್ದಿನ್, ಸದಸ್ಯರಾದ ಏಳುಮಲೈ, ಸುಶೀಲಮ್ಮ ರಾಮಚಂದ್ರ, ರೇಖಾ, ಗೌರಮ್ಮ ಮತ್ತು ಮುಖ್ಯ ಶಿಕ್ಷಕಿ ವೀಣಾಭಾಯಿ ಬಿ.ಎಂ., ಸಹ ಶಿಕ್ಷಕ, ಶೆಟ್ಟಪ್ಪ ಗಸ್ತಿ, ಅನಿತಾ ಮೇಡಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.