ಬೀರೂರು: ಮೊಹರಂ ಹಬ್ಬದ ಪ್ರಯುಕ್ತ ಪಟ್ಟಣದ ವಿವಿಧ ಮಕಾನ್‌ಗಳಲ್ಲಿ ಸ್ಥಾಪಿಸಿದ್ದ ಪಂಜಾ ಮತ್ತು ಕತ್ತಿದೇವರ ಮೆರವಣಿಗೆ ಭಾನುವಾರ ನಡೆಯಿತು.
ಶನಿವಾರ ಢಾಲ್ ಸಿದ್ದೀಕ್, ಬಾರಾ ಮಕಾನ್, ಚಾಂದ್‌ಪೀರ್ ಮತ್ತು ಧೋಂಡಿ ಮಕಾನ್‌ಗಳಲ್ಲಿ ಉಪವಾಸವಿದ್ದ ಭಕ್ತರು ಕೆಂಡ ಹಾಯ್ದು ಹರಕೆ ತೀರಿಸಿದರು.
ಭಾನುವಾರ ಕಾಬಾದ ಅಲಂಕೃತ ತಾಬೂತ್‌ನೊಂದಿಗೆ ಅಂಜುಮನ್ ಮೊಹಲ್ಲಾದಿಂದ ಹೊರಟ ಮೆರವಣಿಗೆಯು ಹಳೇಪೇಟೆಯ ಧೋಂಡಿ ಮಕಾನ್, ಬಿ.ಎಚ್.ರಸ್ತೆಯ ಢಾಲ್ ಸಿದ್ದೀಕ್ ಮಕಾನ್‌ಗಳಿಗೆ ಭೇಟಿ ನೀಡಿ ಅಲ್ಲಿ ಭಕ್ತರಿಂದ ಪೂಜೆಗೊಂಡ ಬಳಿಕ, ಪಂಜಾಗಳನ್ನು ಹೊತ್ತು ತಂದ ಮಕಾನ್‌ಗಳ ಅನುಯಾಯಿಗಳು ಧೂಪ ಸೇವೆ ಪಡೆದು ಪಟ್ಟಣದಲ್ಲಿ ಸ್ಥಾಪಿಸಿದ್ದ ಎಲ್ಲ ಮಕಾನ್‌ಗಳಿಗೆ ಭೇಟಿ ನೀಡಿದರು.
ಮನೆಗಳಲ್ಲಿ ತಯಾರಿಸಿದ್ದ ವಿಶೇಷ ಖಾದ್ಯಗಳನ್ನು ಪಂಜಾಗಳಿಗೆ ಸಮರ್ಪಿಸಲಾಯಿತು. ರಾತ್ರಿ ತಾಬೂತ್‌ಗಳ ಮೆರವಣಿಗೆ ಮತ್ತು ವಿಸರ್ಜನೆ ನಡೆದರೆ ಕತ್ತಿದೇವರಿಗೆ ಸಕ್ಕರೆ ಓದಿಸಲಾಗುವುದು. ಹಳೇಪೇಟೆ ಖಾಜಿ ಮೊಹಲ್ಲಾ, ಅಂಜುಮನ್ ಮೊಹಲ್ಲಾ, ಶಾಂತಿನಗರ ಬಡಾವಣೆಗಳಲ್ಲಿ ಹಬ್ಬದ ಸಡಗರವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.