ADVERTISEMENT

ಸಾಲ ವಸೂಲಾತಿ: 3ನೇ ಬಾರಿ ಜಿಲ್ಲೆಗೆ ಪ್ರಥಮ

ನರಸಿಂಹರಾಜಪುರ ಸಹಕಾರ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:28 IST
Last Updated 28 ಸೆಪ್ಟೆಂಬರ್ 2022, 5:28 IST
ನರಸಿಂಹರಾಜಪುರದಲ್ಲಿ ನಡೆದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಮಹಾಸಭೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿರನ್ನು ಗೌರವಿಸಲಾಯಿತು.
ನರಸಿಂಹರಾಜಪುರದಲ್ಲಿ ನಡೆದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಮಹಾಸಭೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿರನ್ನು ಗೌರವಿಸಲಾಯಿತು.   

ನರಸಿಂಹರಾಜಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕಳೆದ ಮೂರು ವರ್ಷದಿಂದ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಬ್ಯಾಂಕ್‌ನ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ವಿ.ಸಂದೇಶ್ ಹೇಳಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಶೇ 75. 83ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ₹6.17ಕೋಟಿ ಸಾಲ ನೀಡಲಾಗಿದೆ. ₹1.59ಲಕ್ಷ ಲಾಭ ಗಳಿಸಲಾಗಿದೆ ಎಂದರು.

ADVERTISEMENT

ಬ್ಯಾಂಕ್‌ನಿಂದ ಗೊಬ್ಬರ ವ್ಯಾಪಾರ ಪ್ರಾರಂಭಿಸಬೇಕು ಎಂದು ಹಿರಿಯ ಸದಸ್ಯ ಪಿ.ಕೆ.ಬಸವರಾಜ್ ಒತ್ತಾಯಿಸಿದರು.

ವ್ಯವಸ್ಥಾಪಕ ಪ್ರದ್ಯುಮ್ನ ವಾರ್ಷಿಕ ವರದಿ ವಾಚಿಸಿದರು. ವಿನಾಯಕ್ ಮಾಳೂರುದಿಣ್ಣೆ, ಸುಬ್ಬಣ್ಣ, ಉಪಾಧ್ಯಕ್ಷ ವಿ.ಕೆ.ಸನ್ನಿ, ನಿರ್ದೇಶಕರಾದ ಕೆ.ಸಿ.ಜಯಪಾಲ, ವೈ.ಎಸ್.ರವಿ, ಎನ್.ಜಿ.ನಾಗೇಶ್, ಕೆ.ಆರ್.ಜಯಂತಿ, ಸತ್ಯಾನಂದ, ಕೆ.ಜಿ.ಯಲ್ಲಪ್ಪಗೌಡ, ಎ.ಎಲ್.ಮಹೇಶ್, ಎನ್. ರಂಗನಾಥ್, ಎನ್.ಆರ್.ಸತೀಶ್, ಡಿ.ಎನ್.ಅಶ್ವನ್, ವಿಷಯ ಪರಿಣಿತ ಕೆ.ಕೆ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.