ADVERTISEMENT

ನರಸಿಂಹರಾಜಪುರ | ದೇವಿಗೆ ಧನಲಕ್ಷ್ಮಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:53 IST
Last Updated 29 ಸೆಪ್ಟೆಂಬರ್ 2025, 6:53 IST
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ ವಿದ್ಯಾಗಣಪತಿ ಪೆಂಡಾಲ್ ನಲ್ಲಿ ಪ್ರತಿಷ್ಠಾಪಿರುವ ದೇವಿಗೆ ಭಾನುವಾರ ಧನಲಕ್ಷ್ಮಿ ಅಲಂಕಾರ ಮಾಡಲಾಗಿತ್ತು
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ ವಿದ್ಯಾಗಣಪತಿ ಪೆಂಡಾಲ್ ನಲ್ಲಿ ಪ್ರತಿಷ್ಠಾಪಿರುವ ದೇವಿಗೆ ಭಾನುವಾರ ಧನಲಕ್ಷ್ಮಿ ಅಲಂಕಾರ ಮಾಡಲಾಗಿತ್ತು   

ನರಸಿಂಹರಾಜಪುರ: ಪಟ್ಟಣದ ಶರನ್ನವರಾತ್ರಿ ಸೇವಾ ಸಮಿತಿಯಿಂದ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿರುವ ದೇವಿಗೆ ಭಾನುವಾರ ಧನಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.

ಬೆಳಿಗ್ಗೆ ತ್ರಿಕಾಲ ಪೂಜೆ ನಡೆಯಿತು. ಸಂಜೆ ಸುಂಕದಕಟ್ಟೆ ಧನಲಕ್ಷ್ಮಿ ಸ್ವಸಹಾಯ ಸಂಘ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಜ್ವಾಲಾಮಾಲಿನಿ ದೇವಿಗೆ ಉಡಿ ಅರ್ಪಣೆ: ಇಲ್ಲಿನ ಸಿಂಹನಗದ್ದೆ ಬಸ್ತಿ ಮಠದಲ್ಲಿರುವ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರದಲ್ಲಿ ಭಾನುವಾರ ನವರಾತ್ರಿ ಉತ್ಸವದ ಅಂಗವಾಗಿ ದೇವಿಗೆ ಷ್ಠಮಸಿದ್ಧಿ ಅಭಯಹಸ್ತೆ ಶೋಭಿತೆ ಅಲಂಕಾರ ಮಾಡಲಾಗಿತ್ತು.

ADVERTISEMENT

ದೇವಿಗೆ 108 ಬಗೆಯ ಸೀರೆ ಅರ್ಪಣೆ ಮಾಡಲಾಯಿತು. ಅಮ್ಮನವರಿಗೆ ಉಯ್ಯಾಲೆ ಸೇವೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.