ADVERTISEMENT

ನರಸಿಂಹರಾಜಪುರ | 'ವಾರದ ಸಭೆಯಲ್ಲಿ ಯೋಗ ದಿನಾಚರಣೆ'

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:27 IST
Last Updated 22 ಜೂನ್ 2025, 14:27 IST
ನರಸಿಂಹರಾಜಪುರದ ರೋಟರಿ ಸಂಸ್ಥೆಯಲ್ಲಿ ನಡೆದ ವಾರದ ಸಭೆಯಲ್ಲಿ ಯೋಗದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ ಕೆ.ಎಸ್.ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು
ನರಸಿಂಹರಾಜಪುರದ ರೋಟರಿ ಸಂಸ್ಥೆಯಲ್ಲಿ ನಡೆದ ವಾರದ ಸಭೆಯಲ್ಲಿ ಯೋಗದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ ಕೆ.ಎಸ್.ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು   

ನರಸಿಂಹರಾಜಪುರ: ಯೋಗವು ವಿಶ್ವಕ್ಕೆ ಭಾರತವು ನೀಡಿದ ದೊಡ್ಡ ಕೊಡುಗೆ ಎಂದು ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಹೇಳಿದರು.

ಇಲ್ಲಿನ ರೋಟರಿ ಹಾಲ್‌ನಲ್ಲಿ ನಡೆದ ವಾರದ ಸಭೆಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗದ ಬಗ್ಗೆ ಉಪನ್ಯಾಸ ನೀಡಿದ ಅವರು, ಯೋಗವು ದೇಹ ಮತ್ತು ಮನಸ್ಸನ್ನು ಒಗ್ಗೂಡಿಸುವ ಒಂದು ಪ್ರಕ್ರಿಯೆಯಾಗಿದೆ ಎಂದರು.

ರೋಟರಿ ಅಧ್ಯಕ್ಷ ಜಿ.ಆರ್.ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸದಸ್ಯರಾದ ಎಸ್.ಎಸ್. ಶಾಂತಕುಮಾರ್, ಧನಂಜಯ, ಡಾ.ಎಲ್ದೋಸ್, ಕಣಿವೆ ವಿನಯ್, ಲೋಕೇಶ್, ಸೋಮಶೇಖರ್, ಕಿರಣ್, ಮನೀಶ್, ಚೇತನ್, ವಿದ್ಯಾನಂದಕುಮಾರ್ ಇದ್ದರು. ಉಪನ್ಯಾಸ ನೀಡಿದ ರಾಜಕುಮಾರ್ ಅವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.