ಕೊಪ್ಪ: ಜನರು ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹೋದಾಗ ಜನರನ್ನು ಅಲೆದಾಡಿಸುವುದು, ಅವರ ಅರ್ಜಿ ತಿರಸ್ಕರಿಸುವುದು ಶೃಂಗೇರಿ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ಆರೋಪಿಸಿದ್ದಾರೆ.
ಒಂದು ವರ್ಷದ ಈಚೆಗೆ ಹಲವಾರು ಬಡ ಕುಟುಂಬದವರು, ರೈತರು, ಜನಸಾಮಾನ್ಯರು ಹಲವು ದಾಖಲೆಗಳನ್ನು ಮಾಡಿಸಿಕೊಳ್ಳಲು ಹೋದಾಗ ವಂಶವೃಕ್ಷವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕೆಂದು, ವಂಶವೃಕ್ಷದಲ್ಲಿ ತಲೆಮಾರಿನ ಕುಟುಂಬದವರ ಹೆಸರನ್ನು ನಮೂದಿಸಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದಿದ್ದಾರೆ.
ವಂಶವೃಕ್ಷ ಪಡೆಯಬೇಕೆಂದರೆ ಪೌತಿಯಾದವರ ಆಧಾರ್ ಕಾರ್ಡ್ ಸಲ್ಲಿಸಬೇಕು ಎಂಬ ಅವೈಜ್ಞಾನಿಕ ಕಾನೂನನ್ನು ಸೃಷ್ಟಿ ಮಾಡಿದ್ದರಿಂದ ಬಹಳಷ್ಟು ಜನರ ವಂಶವೃಕ್ಷಗಳು ವಜಾ ಆಗಿ ಬರುತ್ತಿವೆ. ಹೀಗಾಗಿ, ಪೌತಿಯಾದವರ ಆಧಾರ್ ಕಾರ್ಡ್ ಸಲ್ಲಿಸದೆ ಹೆಸರಿನ ಆಧಾರದ ಮೇಲೆ ವಂಶವೃಕ್ಷ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.