ADVERTISEMENT

ಕಡೂರು: ಕಾಮಗಾರಿಗೆ ತಂದಿಟ್ಟಿದ ಪೈಪ್ ಕಳವು ಮಾಡಿದ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 3:01 IST
Last Updated 21 ಜುಲೈ 2025, 3:01 IST
ಕಳವು ಮಾಡಿದ್ದ ಆರೋಪಿಗಳಿಂದ ವಶಪಡಿಸಿಕೊಂಡ ಪೈಪ್‌ ಹಾಗೂ ವಾಹನದ ಜತೆ ಪೊಲೀಸರು
ಕಳವು ಮಾಡಿದ್ದ ಆರೋಪಿಗಳಿಂದ ವಶಪಡಿಸಿಕೊಂಡ ಪೈಪ್‌ ಹಾಗೂ ವಾಹನದ ಜತೆ ಪೊಲೀಸರು   

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ 9ನೇ ಮೈಲಿಕಲ್ಲು ಸಮೀಪದಲ್ಲಿ ಪೈಪ್‌ಲೈನ್ ಕಾಮಗಾರಿ ಜಾಗದಲ್ಲಿದ್ದ ₹ 40ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಸಿಂಗಟಗೆರೆ ಪೊಲೀಸರು ಬಂಧಿಸಿ, ಪೈಪ್ ಅನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ನಗರದ ಬೋವಿ ಕಾಲೊನಿಯ ವೆಂಕಟೇಶ್, ಗಿರೀಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು. ಜುಲೈ 14ರಂದು ಪೈಪ್ ಕಳವು ಮಾಡಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಸಿಂಗಟಗೆರೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ರಂಗನಾಥ್, ನಾಗರಾಜ್, ಧನಪಾಲ್ ನಾಯ್ಕ್, ಸುರೇಶ್, ಮೋಹನ್, ವಿಜಯ ಕುಮಾರ್, ತೀರ್ಥ ಕುಮಾರ್, ಕಲ್ಲೇಶನಾಯ್ಕ್, ಕಲ್ಲೇಶ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.