ADVERTISEMENT

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಿಎಂಶ್ರೀ ಯೋಜನೆ ಸಹಕಾರಿ: ಲಕ್ಷ್ಮಣ್ ಶೆಟ್ಟಿ

ಮಕ್ಕಳ ಕರಾಟೆ ಕಲಿಕೆಗೆ ಯೋಗ ಮ್ಯಾಟ್ ವಿತರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:41 IST
Last Updated 15 ಫೆಬ್ರುವರಿ 2026, 2:41 IST
ನರಸಿಂಹರಾಜಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕರಾಟೆ ಕಲಿಕೆಗೆ ಯೋಗ ಮ್ಯಾಟ್ ಅನ್ನು ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ವಿತರಿಸಿದರು
ನರಸಿಂಹರಾಜಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕರಾಟೆ ಕಲಿಕೆಗೆ ಯೋಗ ಮ್ಯಾಟ್ ಅನ್ನು ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ವಿತರಿಸಿದರು   

ನರಸಿಂಹರಾಜಪುರ: ‘ಪಿಎಂಶ್ರೀ ಯೋಜನೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ’ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಅಭಿಪ್ರಾಯಪಟ್ಟರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌‌ನ ಪ್ರಾಥಮಿಕ ವಿಭಾಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‍‘ಮಕ್ಕಳಗೆ ಕರಾಟೆ ಕಲಿಕೆಗಾಗಿ ಸರ್ಕಾರ ನೀಡಿರುವ ಯೋಗ ಮ್ಯಾಟ್ ವಿತರಿಸಿ’ ಅವರು ಮಾತನಾಡಿದರು.

ಮಕ್ಕಳು ಪಠ್ಯದ ಜತೆಗೆ ಕಲೆ, ಸಂಗೀತ, ಕ್ರೀಡೆ, ವ್ಯವಹಾರಿಕ ಜ್ಞಾನ, ಪ್ರವಾಸ, ವೃತ್ತಿಪರ ಜೀವನ, ಕೌಶಲ, ವ್ಯಕ್ತಿತ್ವ ವಿಕಸನ, ಇಂಗ್ಲಿಷ್ ಸಂವಹನ ಮತ್ತಿತರ ವಿಷಯ ಕಲಿಸುವುದಕ್ಕೆ ನುರಿತ ಶಿಕ್ಷಕರನ್ನು ಸರ್ಕಾರ ನೇಮಿಸಿದೆ. ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದು, ಈಗಾಗಲೇ ಶಿಕ್ಷಕರು ಈ ಯೋಜನೆಯ ಉಪಯೋಗವನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಂಡಿದ್ದೇವೆ ಎಂದರು.

ADVERTISEMENT

ಭೂದಾನಿಗಳಾದ ಎಚ್.ಎನ್. ರವಿಶಂಕರ್ ಮಾತನಾಡಿ, ‘ಸದರಿ ಶಾಲೆಗೆ ಸೇರಿದ 6 ಎಕರೆ ಜಾಗವನ್ನು ಬಿಡಿಸಿಕೊಳ್ಳುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಇನ್ನೂ ಸ್ವಲ್ಪ ಜಾಗವನ್ನು ಶೀಘ್ರ ಬಿಡಿಸಿಕೊಂಡು ಶಾಲೆಗೆ ಆದಾಯ ತರುವ ಕೆಲಸ ಮಾಡಲಾಗುವುದು. ಒತ್ತುವರಿಯಾಗಿದ್ದ ಶಾಲೆಯ ಜಾಗವನ್ನು ಬಿಡಿಸಿ ಕೊಂಡಿರುವುದರಿಂದ ನಮ್ಮ ಶಾಲೆಗೆ ಸಾಕಷ್ಟು ಆದಾಯ ಬರುವಂತಾಗಿದೆ’ ಎಂದರು.

ಎಸ್‌ಡಿಎಂಸಿ ಸದಸ್ಯರಾದ ಅಬೂಬಕರ್, ಪುರುಷೋತ್ತಮ, ಸೈಯದ್ ಸಿಗ್ಬತ್ ತುಲ್ಲಾ, ಅಭಿನವಗಿರಿರಾಜ್, ಕೀರ್ತಿ ಶೆಟ್ಟಿ, ಮುಖ್ಯ ಶಿಕ್ಷಕ ನಂಜುಂಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.