ADVERTISEMENT

ಧಾರಾಕಾರ ಮಳೆ; ಗದ್ದೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:55 IST
Last Updated 7 ಜುಲೈ 2022, 4:55 IST
ಧಾರಾಕಾರ ಮಳೆಯಿಂದಾಗಿ ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದಲ್ಲಿ ನಾಟಿಗಾಗಿ ನಿರ್ಮಿಸಿದ್ದ ಭತ್ತದ ಸಸಿಮಡಿಗಳು ನೀರಿನಲ್ಲಿ ಮುಳುಗಿವೆ
ಧಾರಾಕಾರ ಮಳೆಯಿಂದಾಗಿ ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದಲ್ಲಿ ನಾಟಿಗಾಗಿ ನಿರ್ಮಿಸಿದ್ದ ಭತ್ತದ ಸಸಿಮಡಿಗಳು ನೀರಿನಲ್ಲಿ ಮುಳುಗಿವೆ   

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಬುಧವಾರ ಬಿರುಸಾಗಿ ಮಳೆ ಸುರಿದಿದೆ. ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಬಣಕಲ್‌ ವಿಲೇಜ್‌, ಗೋಣಿಬೀಡಿನಲ್ಲಿ ಮೂರು ಮನೆಗಳ ಗೋಡೆಗಳು ಕುಸಿದಿವೆ.

ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ, ಹಂತೂರು, ಉಗ್ಗೆಹಳ್ಳಿ, ಊರುಬಗೆ, ಫಲ್ಗುಣಿ ಭಾಗದಲ್ಲಿ ಗದ್ದೆ ನಾಟಿಗಾಗಿ ನಿರ್ಮಿಸಿದ್ದ ಸಸಿಮಡಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಎಸ್ಟೇಟ್ ಕುಂದೂರು, ಬೀಜುವಳ್ಳಿ, ಜನ್ನಾಪುರ ಭಾಗಗಳಲ್ಲಿ ಶುಂಠಿಗದ್ದೆಗೆ ನೀರು ನುಗ್ಗಿ ಹಾನಿಯಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್‌.ಆರ್‌.ಪುರ ಭಾಗದಲ್ಲಿ ಸತತವಾಗಿ ಮಳೆ ಸುರಿದಿದೆ. ಶೃಂಗೇರಿ ತಾಲ್ಲೂಕಿನ ಕಿಗ್ಗಾ– 18.3, ಕಿಗ್ಗಾ– 14.2 ಸೆಂ.ಮೀ ಮಳೆಯಾಗಿದೆ.

ADVERTISEMENT

ಮುಂದುವರಿದ ಶೋಧ: ಚಿಕ್ಕಮಗಳೂರು ತಾಲ್ಲೂಕಿನ ತೊಗರಿಹಂಕಲ್ ಸನಿಹದ ಕಾಫಿ ತೋಟದ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಒಂದನೇ ತರಗತಿ ಬಾಲಕಿ ಸುಪ್ರಿತಾ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.