ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆರ್ಭಟಿಸುತ್ತಿದ್ದು, ಧಾರಾಕಾರ ಮಳೆ ಮುಂದುವರಿದಿದೆ.
ಜಿಲ್ಲೆಯ ಎಲ್ಲೆಡೆ ಮಳೆಯಾಗಿದ್ದು, ಕಡೂರು, ತರೀಕೆರೆ, ಚಿಕ್ಕಮಗಳೂರು, ಅಜ್ಜಂಪುರ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಸಿಂಗಟಗೆರೆಯಲ್ಲಿ ಅತೀ ಹೆಚ್ಚು 8.2 ಸೆಂಟಿ ಮೀಟರ್ ಮಳೆಯಾಗಿದೆ. ಕಡೂರು, ಬೀರೂರು, ಸಖರಾಯಪಟ್ಟಣ, ಪಂಚನಹಳ್ಳಿ, ಕೊಪ್ಪ, ಹರಿಹರಪುರ, ಅಮೃತ್‌ಪುರದಲ್ಲಿ 5 ಸೆಂಟಿ ಮೀಟರ್‌ಗೂ ಹೆಚ್ಚು ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮೆಳೆಗೆ ಹಲವು ಕೆರೆ–ಕಟ್ಟೆಗಳು ತುಂಬಿವೆ.
ಜಿಲ್ಲೆಯ ಹಲವೆಡೆ ಬುಧವಾರ ಗುಡುಗು ಸಹಿರ ಭಾರಿ ಮಳೆಯಾಗಲಿದ್ದು, ಇನ್ನೂ ನಾಲ್ಕು ದಿನ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ವಿವರ(ಸೆಂಟಿ ಮೀಟರ್‌ಗಳಲ್ಲಿ–ಮಂಗಳವಾರ ಬೆಳಿಗ್ಗೆ 8.30ರ ತನಕ)
ಚಿಕ್ಕಮಗಳೂರು; 2.8
ಅಂಬಳೆ; 1.8
ಆಲ್ದೂರು; 2.2
ಸಂಗಮೇಶ್ವರಪೇಟೆ; 2.2
ಲಕ್ಯಾ; 3.7
ಆವತಿ; 4.0
ಜಾಗರ; 4.4
ವಸ್ತಾರೆ; 3.5
ಕಡೂರು; 5.7
ಬೀರೂರು; 5.5
ಹಿರೇನಲ್ಲೂರು; 2.8
ಸಖರಾಯಪಟ್ಟಣ: 5.1
ಸಿಂಗಟಗೆರೆ; 8.2
ಯಗಟಿ; 3.4
ಪಂಚನಹಳ್ಳಿ; 5.4
ಕೊಪ್ಪ; 6.1
ಹರಿಹರಪುರ; 5.0
ಮೇಗುಂದ; 2.4
ಮೂಡಿಗೆರೆ; 1.3
ಬಣಕಲ್; 2.1
ಗೋಣಿಬೀಡು; 2.9
ಬಾಳೂರು; 2.5
ಎನ್.ಆರ್.ಪುರ; 2.2
ಬಾಳೆಹೊನ್ನೂರು; 3.4
ಶೃಂಗೇರಿ; 3.5
ಕಿಗ್ಗ; 2.5
ತರೀಕೆರೆ; 1.3
ಅಮೃತಾಪುರ; 4.3
ಲಕ್ಕವಳ್ಳಿ; 1.7
ಲಿಂಗದಹಳ್ಳಿ; 3.5
ಅಜ್ಜಂಪುರ; 4.6
ಚೌಳಹಿರಿಯೂರು; 4.7
ಶಿವನಿ; 3.3
ಅಮೃತ್‌ಪುರ; 5.8
ಹಿರೇನಲ್ಲೂರು; 4.4
ಕಳಸ; 2.4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.