ADVERTISEMENT

ಶ್ರೀರಾಮ ಸೇವಾ ಸಮಿತಿ: ರಾಮೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 14:56 IST
Last Updated 17 ಏಪ್ರಿಲ್ 2024, 14:56 IST
ನರಸಿಂಹರಾಜಪುರ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಶ್ರೀರಾಮ ಸೇವಾ ಸಮಿತಿಯಿಂದ ಬುಧವಾರ ರಾಮೋತ್ಸವಕ್ಕೆ ಚಾಲನೆ ನೀಡಲಾಯಿತು. ವಿ.ಎಸ್.ಕೃಷ್ಣಭಟ್, ಎಚ್.ಎನ್.ಶಿವಶಂಕರ್ ಭಾಗವಹಿಸಿದ್ದರು
ನರಸಿಂಹರಾಜಪುರ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಶ್ರೀರಾಮ ಸೇವಾ ಸಮಿತಿಯಿಂದ ಬುಧವಾರ ರಾಮೋತ್ಸವಕ್ಕೆ ಚಾಲನೆ ನೀಡಲಾಯಿತು. ವಿ.ಎಸ್.ಕೃಷ್ಣಭಟ್, ಎಚ್.ಎನ್.ಶಿವಶಂಕರ್ ಭಾಗವಹಿಸಿದ್ದರು   

ನರಸಿಂಹರಾಜಪುರ: ಪಟ್ಟಣದ ಅಗ್ರಹಾರದಲ್ಲಿರುವ ಶ್ರೀರಾಮ ಸೇವಾ ಸಮಿತಿಯಿಂದ 8 ದಿನಗಳ ಕಾಲ ನಡೆಯುವ ರಾಮೋತ್ಸವಕ್ಕೆ ಉಮಾಮಹೇಶ್ವರ ಸಮುದಾಯಭವನದಲ್ಲಿ ಬುಧವಾರ ಚಾಲನೆ ನೀಡಲಾಯಿತು.

ರಾಮನವಮಿ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಮಂಟಪ ಪ್ರತಿಷ್ಠೆ, ಸೀತಾರಾಮರ ಕಲ್ಪೋಕ್ತ ಪೂಜೆ, ಮಧ್ಯಾಹ್ನ 12ಕ್ಕೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದವು. ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಎಚ್.ಎನ್.ಶಿವಶಂಕರ್, ಶೈಲಾ ಶಿವಶಂಕರ್, ಭಾಗ್ಯನಂಜುಂಡಸ್ವಾಮಿ ಇದ್ದರು. ಸಂಜೆ ಭಾರತೀ ಭಕ್ತವೃಂದ, ಶಾರದಾ ಮಾತಾ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ADVERTISEMENT
ನರಸಿಂಹರಾಜಪುರದ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಶ್ರೀರಾಮ ಸೇವಾ ಸಮಿತಿಯಿಂದ ಬುಧವಾರ ರಾಮೋತ್ಸವಕ್ಕೆ ಚಾಲನೆ ನೀಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.