ADVERTISEMENT

ಮೂಡಿಗೆರೆ | ಟಿಎಪಿಸಿಎಂಎಸ್: ಶೇ 5 ಡಿವಿಡೆಂಡ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 5:39 IST
Last Updated 25 ಸೆಪ್ಟೆಂಬರ್ 2022, 5:39 IST
ಮೂಡಿಗೆರೆ ಪಟ್ಟಣದ ರೈತಭವನದಲ್ಲಿ ಶನಿವಾರ ನಡೆದ ಟಿಎಪಿಸಿಎಂಎಸ್ ವಾರ್ಷಿಕ ಮಹಾಸಭೆಯನ್ನು ತಾಲ್ಲೂಕಿನ ಸಹಕಾರ ಕ್ಷೇತ್ರದ ಹಿರಿಯ ಮುಖಂಡ ಒ.ಎಸ್ ಗೋಪಾಲಗೌಡ ಉದ್ಘಾಟಿಸಿದರು. ಅಧ್ಯಕ್ಷ ಒ.ಜಿ ರವಿ, ವಿ.ಕೆ. ಶಿವೇಗೌಡ, ಪಿ.ಕೆ ನಾಗೇಶ್, ಯು.ಎಚ್. ಹೇಮಶೇಖರ್, ಬಿ.ಎಸ್ ಜಯರಾಂ, ಮಗ್ಗಲಮಕ್ಕಿ ಲಕ್ಷ್ಮಣಗೌಡ, ಎಚ್.ಜಿ ಸುರೇಂದ್ರ ಇದ್ದರು.
ಮೂಡಿಗೆರೆ ಪಟ್ಟಣದ ರೈತಭವನದಲ್ಲಿ ಶನಿವಾರ ನಡೆದ ಟಿಎಪಿಸಿಎಂಎಸ್ ವಾರ್ಷಿಕ ಮಹಾಸಭೆಯನ್ನು ತಾಲ್ಲೂಕಿನ ಸಹಕಾರ ಕ್ಷೇತ್ರದ ಹಿರಿಯ ಮುಖಂಡ ಒ.ಎಸ್ ಗೋಪಾಲಗೌಡ ಉದ್ಘಾಟಿಸಿದರು. ಅಧ್ಯಕ್ಷ ಒ.ಜಿ ರವಿ, ವಿ.ಕೆ. ಶಿವೇಗೌಡ, ಪಿ.ಕೆ ನಾಗೇಶ್, ಯು.ಎಚ್. ಹೇಮಶೇಖರ್, ಬಿ.ಎಸ್ ಜಯರಾಂ, ಮಗ್ಗಲಮಕ್ಕಿ ಲಕ್ಷ್ಮಣಗೌಡ, ಎಚ್.ಜಿ ಸುರೇಂದ್ರ ಇದ್ದರು.   

ಮೂಡಿಗೆರೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಕಳೆದ ಸಾಲಿನ ಆರ್ಥಿಕ ಚಟುವಟಿಕೆಯಲ್ಲಿ ₹ 10.40 ಲಕ್ಷ ಲಾಭ ಗಳಿಸಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಒ.ಜಿ ರವಿ ತಿಳಿಸಿದರು.

ಪಟ್ಟಣದ ರೈತಭವನದಲ್ಲಿ ನಡೆದ ಟಿಎಪಿಸಿಎಂಎಸ್ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ‘ಸಂಘವು 3,424 ಸದಸ್ಯರನ್ನು ಒಳಗೊಂಡಿದ್ದು, ಪ್ರಸಕ್ತ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ‘ಎ’ ವರ್ಗವನ್ನು ಹೊಂದಿದ್ದು, ಈ ಬಾರಿ ಸದಸ್ಯರಿಗೆ ಶೇ 5ರಷ್ಟು ಡಿವಿಡೆಂಡ್‌ ನೀಡಲಾಗುವುದು. ಸಂಘದ ಅಧೀನದಲ್ಲಿರುವ ರೈತ ಭವನಕ್ಕೆ ಪಾಲ್ಸ್ ಸೀಲಿಂಗ್ ಅಳವಡಿಸಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಮಗ್ಗಲಮಕ್ಕಿ ಲಕ್ಷ್ಮಣಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್, ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಶಿವಾನಂದ್, ನಿವೃತ್ತ ನೌಕರ ತ್ಯಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಟಿಎಪಿಸಿಎಂಎಸ್ ಉಪಾಧ್ಯಕ್ಷ ಎಚ್.ಜಿ. ಉತ್ತಮ್ ಕುಮಾರ್, ನಿರ್ದೇಶಕರಾದ ಬಿ.ಎನ್ ಜಯಂತ್ ಕುಮಾರ್, ಎಂ.ಎಲ್ ಕಲ್ಲೇಶ್, ಎಂ.ವಿ ಜಗದೀಶ್, ವಿ.ಕೆ ಶಿವೇಗೌಡ, ಎಚ್.ಜಿ ಸಂದರ್ಶ, ಎಂ.ಎಲ್. ಅಭಿಜಿತ್, ರಂಜನ್ ಅಜಿತ್ ಕುಮಾರ್, ರೇಣುಕಾ ಮಹೇಂದ್ರ, ಕೆ.ಪಿ ಭಾರತಿ, ಯು.ಎಚ್. ಹೇಮಶೇಖರ್, ಜಗನ್ನಾಥ್, ಸುರೇಶ್, ಎಂ.ಕೆ. ಚಂದ್ರೇಶ್, ಪಿ.ಕೆ. ನಾಗೇಶ್, ವ್ಯವಸ್ಥಾಪಕ ನಿರ್ದೇಶಕ ಎಚ್.ಎಚ್. ವಿವೇಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.