ತರೀಕೆರೆ: ಅಂತರರಾಷ್ಟ್ರೀಯ ಯೋಗ ದಿನವನ್ನು ತಾಲ್ಲೂಕಿನ ನಂದಿ ಗ್ರಾಮದ ನುಲೆ ಚಂದಯ್ಯನವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು.
ನುಲೆ ಚಂದಯ್ಯ ದೇವಸ್ಥಾನದ ಉಪಾಧ್ಯಕ್ಷ ಶಂಕರಲಿಂಗಪ್ಪ, ಸದಸ್ಯರಾದ ಎನ್.ಸಿ.ನಾಗರಾಜ್, ಎನ್.ಎಸ್. ನಾಗರಾಜ್, ಎಸ್.ಸಿ.ಚಂದ್ರಪ್ಪ, ಎನ್.ಟಿ.ಚಂದ್ರಪ್ಪ, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗೌತಮ್, ಡಾ.ವಿವೇಕಾನಂದ, ಡಾ.ಕಿಶೋರ್, ಡಾ.ಕಾವ್ಯಶ್ರೀ, ರೋಟರಿ ಕ್ಲಬ್ ಅಧ್ಯಕ್ಷ ರಾಕೇಶ್ ಜಿ.ಸಿ., ಕಾರ್ಯದರ್ಶಿ ರವಿಕುಮಾರ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಉಮಾದೇವಿ ದಯಾನಂದ್, ಕಾರ್ಯದರ್ಶಿ ಸುನೀತ ಕಿರಣ್, ಯೋಗ ಶಿಕ್ಷಕರು, ನಂದಿ ಗ್ರಾಮಸ್ಥರು ಭಾಗವಹಿಸಿದ್ದರು.
ಡಾ.ಗೌತಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗಾಯತ್ರಿ ಯೋಗಭ್ಯಾಸ ಮಾಡಿಸಿದರು. ಸದ್ವಿದ್ಯಾ ಶಾಲಾ ಮಕ್ಕಳು ಯೋಗದ ಆಸನಗಳನ್ನು ನೃತ್ಯರೂಪದಲ್ಲಿ ಮಾಡಿದರು. ಧ್ಯಾನವನ್ನು ಕವಿತಾ, ಡಾ.ಕಿಶೋರ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.