ADVERTISEMENT

ತರೀಕೆರೆ | ಅಕಾಲಿಕ ಮಳೆ ಪರಿಣಾಮ: ಉದುರುತ್ತಿರುವ ಕಾಫಿ ಹೂವು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:51 IST
Last Updated 4 ಮಾರ್ಚ್ 2026, 5:51 IST
ಲಿಂಗದಹಳ್ಳಿ ಹೋಬಳಿ ಭಾಗದ ಕಾಫಿ ತೋಟಗಳಲ್ಲಿ ಅಕಾಲಿಕ ಮಳೆಯಿಂದ ಕಾಫಿ ಗಿಡಗಳು ಹೂ ಬಿಟ್ಟು ಉದುರುತ್ತಿರುವುದು 
ಲಿಂಗದಹಳ್ಳಿ ಹೋಬಳಿ ಭಾಗದ ಕಾಫಿ ತೋಟಗಳಲ್ಲಿ ಅಕಾಲಿಕ ಮಳೆಯಿಂದ ಕಾಫಿ ಗಿಡಗಳು ಹೂ ಬಿಟ್ಟು ಉದುರುತ್ತಿರುವುದು    

ತರೀಕೆರೆ: ಕಳೆದ ವಾರ ತಾಲ್ಲೂಕಿನ ಕೆಲವು ಭಾಗದಲ್ಲಿ ಸುರಿದ ಮಳೆಯಿಂದ ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಕೆಮ್ಮಣ್ಣಗುಂಡಿ, ದೂಪದ ಖಾನ್, ಕತ್ಲೆಖಾನ್ ಮೊದಲಾದ ಭಾಗಗಳ ಕಾಫಿ ತೋಟಗಳ ರೋಬಸ್ಟಾ ಮತ್ತು ಅರೇಬಿಕಾ ಕಾಫಿ ಗಿಡಗಳಲ್ಲಿ ಕಾಫಿಗಿಡಗಳಲ್ಲಿ ಹೂವುಗಳು ಅರಳಿ ನಿಂತಿದೆ.

ಮುಂದಿನ ಕೆಲ ದಿನಗಳಲ್ಲೇ ಮತ್ತೊಮ್ಮೆ ಹದ ಮಳೆ ಬಾರದೇ ಹೋದರೆ ಕಾಫಿ ಹೂವುಗಳೆಲ್ಲ ಒಣಗಿ ಉದುರಿ ಹೋಗುವುದರಿಂದ ಮುಂದಿನ ವರ್ಷದ ಕಾಫಿ ಫಸಲಿಗೆ ಹೊಡೆತ ಬೀಳಲಿದೆ ಎಂದು ಮಸ್ಕಲ್ ಮರಡಿ ಕಾಫಿ ತೋಟದ ಮಾಲೀಕರು ತಿಳಿಸಿದ್ದಾರೆ.

ರೋಬಸ್ಟಾ ಕಾಫಿ ತೋಟಗಳಲ್ಲಿ ಕಾಫಿ ಫಸಲಿನ ಕಟಾವು ಕಾರ್ಯ ನಡೆಯುತ್ತಿರುವಾಗಲೇ ಕಡಿಮೆ ಪ್ರಮಾಣದಲ್ಲಿ ಆಕಾಲಿಕ ಮಳೆಯಾಗಿದೆ. ಕಾಫಿ ಹಣ್ಣುಗಳನ್ನು ಕಟಾವು ಮಾಡುವ ಮೊದಲೇ ಕಾಫಿ ಗಿಡಗಳಲ್ಲಿ ಹೂವು ಬಿಟ್ಟಿರುವ  ಕಾರಣ ಕಾಫಿ ಹಣ್ಣುಗಳ ಕಟಾವಿನ ಸಂದರ್ಭದಲ್ಲಿ ಕಾಫಿ ಹೂವುಗಳು ಉದುರಿ ಹೋಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮುಂದಿನ ವರ್ಷದ ಕಾಫಿ ಫಸಲು ಕಡಿಮೆಯಾಗಿ, ಬೆಳಗಾರರಿಗೆ ನಷ್ಟ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.