ಮೂಡಿಗೆರೆ: ಪಟ್ಟಣದ ಬೇಲೂರು ರಸ್ತೆಯ ಪೃಥ್ವಿ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಗಿಡವನ್ನು ಪತ್ತೆ ಹಚ್ಚಿರುವ ಅಬಕಾರಿ ಅಧಿಕಾರಿಗಳು, ಸೋಮವಾರ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೃಥ್ವಿ ಅವರು ಮನೆಯಲ್ಲಿ 707 ಗ್ರಾಂನಷ್ಟು ಗಾಂಜಾಸೊಪ್ಪನ್ನು ಅಧಿಕಾರಿಗಳು ಪತ್ತೆ ಹೆಚ್ಚಿದ್ದಾರೆ. ಚಿಕ್ಕಮಗಳೂರು ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಕೀರ್ತಿ ಕುಮಾರ್,ನಿರೀಕ್ಷಕ ಲೋಕೇಶ ಸಿ, ಸಿಬ್ಬಂದಿ ರಮೇಶ್ ತುಳಜಣ್ಣನವರ, ಶಂಕರ, ಗುರುವ ಹಾಗೂ ವಾಹನ ಚಾಲಕ ಪ್ರವೀಣ್ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.