ADVERTISEMENT

ಹುಲಿ ಗಣತಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಚಾರಣ ಸ್ಥಗಿತ 

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:35 IST
Last Updated 5 ಜನವರಿ 2026, 6:35 IST
<div class="paragraphs"><p>ಹುಲಿ</p></div>

ಹುಲಿ

   

ಕಳಸ: ‘ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಜ. 5ರಿಂದ 12ರವರೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಗಣತಿ ಹಮ್ಮಿಕೊಳ್ಳಲಾಗಿದ್ದು, ಈ ಅವಧಿಯಲ್ಲಿ ಉದ್ಯಾನದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಚಾರಣ ಅಥವಾ ಅರಣ್ಯ ಪ್ರವೇಶ ಸ್ಥಗಿತಗೊಳಿಸಲಾಗಿದೆ’ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂಚನೆ ಹೊರಡಿಸಿದ್ದಾರೆ.

ಆದ್ದರಿಂದ ಕುದುರೆಮುಖ, ಗಂಗಡಿಕಲ್, ಕುರಂಜಾಲ್, ವಾಲಿಕುಂಜ, ನೇತ್ರಾವತಿ, ಕೊಡಚಾದ್ರಿ, ನರಸಿಂಹಪರ್ವತ ಮತ್ತು ಬಂಡಾಜೆ ಪರ್ವತಗಳಿಗೆ ಚಾರಣಕ್ಕೆ ತೆರಳುವುದಕ್ಕೆ ತಡೆ ಬೀಳಲಿದೆ. ಈ ಪ್ರದೇಶದಲ್ಲಿ ಇರುವ ಜಲಪಾತಗಳಿಗೂ ಪ್ರವಾಸಿಗರು ತೆರಳದಂತೆ ಸೂಚನೆ ನೀಡಲಾಗಿದೆ. ಈ ಪ್ರದೇಶದಲ್ಲಿ ಕಾವಲುಗಾರರನ್ನು ನೇಮಿಸಿ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.

ADVERTISEMENT