ADVERTISEMENT

ಹಬ್ಬ ಕಳೆದರೂ ತರಕಾರಿ ದುಬಾರಿ

ಎದುರುಗೊಂಡ ಮಹಾಲಯ ಅಮಾವಾಸ್ಯೆ; ದರ ವ್ಯತ್ಯಾಸ

ರವಿಕುಮಾರ್ ಶೆಟ್ಟಿಹಡ್ಲು
Published 9 ಸೆಪ್ಟೆಂಬರ್ 2022, 2:37 IST
Last Updated 9 ಸೆಪ್ಟೆಂಬರ್ 2022, 2:37 IST
ಕೊಪ್ಪದ ವಾಟರ್ ಟ್ಯಾಂಕ್ ವೃತ್ತದ ಬಳಿ ಗ್ರಾಹಕರು ತರಕಾರಿ ಖರೀದಿಸಿದರು.
ಕೊಪ್ಪದ ವಾಟರ್ ಟ್ಯಾಂಕ್ ವೃತ್ತದ ಬಳಿ ಗ್ರಾಹಕರು ತರಕಾರಿ ಖರೀದಿಸಿದರು.   

ಕೊಪ್ಪ: ಗೌರಿ ಗಣೇಶ ಹಬ್ಬ ಮುಕ್ತಾಯಗೊಂಡು ವಾರ ಕಳೆದರೂ ತರಕಾರಿ ದರ ಏರುಗತಿಯಲ್ಲೇ ಸಾಗಿದೆ.

ಪ್ರತಿದಿನ ತರಕಾರಿ ದರ ವ್ಯತ್ಯಾಸವಾಗುತ್ತಿದೆ. ತಾಲ್ಲೂಕಿನಲ್ಲಿ ತರಕಾರಿ ಬೆಳೆಗಾರರು ಕಡಿಮೆ ಇದ್ದು, ವ್ಯಾಪಾರಸ್ಥರು ತರೀಕೆರೆ, ಚಿಕ್ಕಮಗಳೂರು ಎ.ಪಿ.ಎಂ.ಸಿಯಲ್ಲಿ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಗ್ರಾಹಕರು ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.

ಕಳೆದ ವಾರವಷ್ಟೇ ಹಬ್ಬ ಮುಕ್ತಾಯಗೊಂಡಿದ್ದರಿಂದ ಸಹಜವಾಗಿ ಈ ವಾರದಲ್ಲಿ ತರಕಾರಿ ಬೆಲೆ ಕಡಿಮೆಯಾಗಬೇಕಿತ್ತು, ಆದರೆ, ಕಡಿಮೆಯಾಗಿಲ್ಲ. ಮಳೆ ಕಾರಣದಿಂದ ಬೆಲೆ ಹೆಚ್ಚಾಗಿದೆ ಎಂಬುದು ತರಕಾರಿ ವ್ಯಾಪಾರಸ್ಥರು ಹೇಳುವ ಮಾತು. ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಬೆಲೆಯಲ್ಲಿ ಅಜಗಜಾಂತರ ಇದೆ.

ADVERTISEMENT

ಕಳೆದ ವಾರದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಲೆಕ್ಕದಲ್ಲಿ ಇದ್ದ ಟೊಮೆಟೊ ಸಹಿತ ಬಹುತೇಕ ತರಕಾರಿಗಳ ಬೆಲೆ ಈ ವಾರ ಹೆಚ್ಚಾಗಿದೆ.

ಪಟ್ಟಣದ ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡುವವರು ಸಗಟು ಮಾರಾಟದ ಬೆಲೆಯಲ್ಲಿ ಕೊಡುವುದರಿಂದ ಹೆಚ್ಚಿನ ಗ್ರಾಹಕರು ಅಲ್ಲಿಯೇ ಖರೀದಿಸುತ್ತಿದ್ದಾರೆ. ಕೆಲವು ವ್ಯಾಪಾರಸ್ಥರು ಬೆಳೆಗಾರರಿಂದಲೇ ನೇರವಾಗಿ ತರಕಾರಿ ಖರೀದಿಸಿ, ವ್ಯಾಪಾರ ಮಾಡುವುದರಿಂದ ಗ್ರಾಹಕರಿಗೆ ಇದರಿಂದ ತುಸು ಲಾಭಸಿಕ್ಕಿದೆ.

ಬೆಲೆ ಇಳಿಕೆಯ ನಿರೀಕ್ಷೆಯಲ್ಲಿ ಗೃಹಿಣಿಯರು ಸೇರಿದಂತೆ ಗ್ರಾಹಕರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.