ADVERTISEMENT

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ: ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:42 IST
Last Updated 9 ಜೂನ್ 2025, 15:42 IST
ನರಸಿಂಹರಾಜಪುರದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಲೇಖಾ ವಸಂತ್ ಮಾತನಾಡಿದರು. ಶ್ಯಾಮಲಾ ಸತೀಶ್, ವನಮಾಲಮ್ಮ, ಭಾರತಿಚಂದ್ರೇಗೌಡ ಪಾಲ್ಗೊಂಡಿದ್ದರು
ನರಸಿಂಹರಾಜಪುರದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಲೇಖಾ ವಸಂತ್ ಮಾತನಾಡಿದರು. ಶ್ಯಾಮಲಾ ಸತೀಶ್, ವನಮಾಲಮ್ಮ, ಭಾರತಿಚಂದ್ರೇಗೌಡ ಪಾಲ್ಗೊಂಡಿದ್ದರು   

ನರಸಿಂಹರಾಜಪುರ: ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 2025-26ನೇ ಸಾಲಿನ ಪದಗ್ರಹಣ ಸಮಾರಂಭವು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲಾ ಸತೀಶ್ ಮಾತನಾಡಿ, ಸಂಘದ ಸದಸ್ಯರ ಸಹಕಾರದಿಂದ 25ನೇ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಮುಂದಿನ ಪದಾಧಿಕಾರಿಗಳು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಲೇಖಾ ವಸಂತ್ ವರದಿ ವಾಚಿಸಿದರು. ಖಜಾಂಚಿ ಭಾರತಿ ಚಂದ್ರೇಗೌಡ ಜಮಾ -ಖರ್ಚು ಮಂಡಿಸಿದರು. ಸಂಘದ ಗೌರವಾಧ್ಯಕ್ಷೆ ವನಮಾಲಮ್ಮ ಉಪಸ್ಥಿತರಿದ್ದರು.

ADVERTISEMENT

2025-26ನೇ ಸಾಲಿನ ಅಧ್ಯಕ್ಷರಾಗಿ ಪದ್ಮ ಸತೀಶ್, ಕಾರ್ಯದರ್ಶಿಯಾಗಿ ಪೂರ್ಣಿಮ ಮಧು, ಖಜಾಂಚಿಯಾಗಿ ರೇಖಾ ಮೋಹನ್ ಅಧಿಕಾರ ಸ್ವೀಕಾರ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.