ADVERTISEMENT

ವಾಲಿಬಾಲ್: ಸುಹಾಸ್ ಶೆಟ್ಟಿ ಕ್ಲಬ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:35 IST
Last Updated 2 ಜೂನ್ 2025, 13:35 IST
ಪ್ರಾದೇಶಿಕ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸುಹಾಸ್ ಶೆಟ್ಟಿ ಕ್ಲಬ್ ಐದಳ್ಳಿ ತಂಡ ಪ್ರಶಸ್ತಿಯೊಂದಿಗೆ
ಪ್ರಾದೇಶಿಕ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸುಹಾಸ್ ಶೆಟ್ಟಿ ಕ್ಲಬ್ ಐದಳ್ಳಿ ತಂಡ ಪ್ರಶಸ್ತಿಯೊಂದಿಗೆ   

ಆಲ್ದೂರು: ಇಲ್ಲಿಗೆ ಸಮೀಪದ ಕಣತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಪ್ರಾದೇಶಿಕ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಐದಳ್ಳಿ ಸಿಂಧು ಕುಮಾರ್ ಮಾಲೀಕತ್ವದ ಸುಹಾಸ್ ಶೆಟ್ಟಿ ಕ್ಲಬ್ ಪ್ರಥಮ ಸ್ಥಾನ ಗಳಿಸಿ 15 ಸಾವಿರ ನಗದು ಬಹುಮಾನ ಗೆದ್ದುಕೊಂಡಿತು.

20 ತಂಡಗಳು ಭಾಗವಹಿಸಿದ್ದವು. ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ರಾಕೇಶ್ ರಾಕಿ ಭಾಗವಹಿಸಿದ್ದು ಪ್ರಮುಖ ಆಕರ್ಷಣೆಯಾಗಿತ‌್ತು. ಚಿಕ್ಕ ಮಾಗರವಳ್ಳಿ ತಂಡ ದ್ವಿತೀಯ, ಡೇಂಜರ್ ಬಾಯ್ಸ್ ತಮಿಳ್‌ನಾಡು ತಂಡ ತೃತಿಯ ಸ್ಥಾನ ಪಡೆದುಕೊಂಡವು. ವ್ಯವಸ್ಥಾಪಕ, ಗೆಳೆಯರ ಬಳಗದ ಯಶಸ್ ದರ್ಶನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT