ಮೂಡಿಗೆರೆ(ಚಿಕ್ಕಮಗಳೂರು): ತಾಲ್ಲೂಕಿನ ಹೇರಿಕೆ ಗ್ರಾಮದಲ್ಲಿ ಕಾಡಾನೆಯೊಂದು ಮನೆಯ ಪಕ್ಕದ ಶೆಡ್‌ಗೆ ಕಾಡಾನೆಯೊಂದು ನುಗ್ಗಿ ಕಾರಿನ ಗಾಜು ಪುಡಿಗೊಳಿಸಿದೆ.
ಮಹೇಶ್ ಎಂಬುವರಿಗೆ ಸೇರಿದ ಕಾರಿನ ಹಿಂಬದಿಯ ಗಾಜನ್ನು ಕಾಡಾನೆ ಒಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಊರಿನೊಳಗೆ ಬರುತ್ತಿರುವ ಕಾಡಾನೆ ಹಾವಳಿ ನಿಯಂತ್ರಿಸಬೇಕು. ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.