ADVERTISEMENT

ಹರಾಜು: ರೂ 7.88 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 5:30 IST
Last Updated 16 ಏಪ್ರಿಲ್ 2011, 5:30 IST
ಹರಾಜು: ರೂ 7.88 ಲಕ್ಷ ಸಂಗ್ರಹ
ಹರಾಜು: ರೂ 7.88 ಲಕ್ಷ ಸಂಗ್ರಹ   

ಚಿತ್ರದುರ್ಗ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದಲ್ಲಿ ಶುಕ್ರವಾರ ಹಳೇ ವಾಹನಗಳ ಹರಾಜಿನಿಂದ ್ಙ 7.88 ಲಕ್ಷ ಸಂಗ್ರಹವಾಯಿತು.
ಬುಲೆಟ್ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು. ್ಙ 30ರಿಂದ ್ಙ 59 ಸಾವಿರವರೆಗೆ ಬುಲೆಟ್ ವಾಹನಗಳ ಮಾರಾಟವಾದವು.

ಹರಾಜು ಪ್ರಕ್ರಿಯೆ ಸಭೆಯಲ್ಲಿ ಬೆಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಧಾರವಾಡ ಜಿಲ್ಲೆಗಳ 250 ಬಿಡ್‌ದಾರರು ಪಾಲ್ಗೊಂಡಿದ್ದರು.
ಒಟ್ಟು 21 ವಾಹನಗಳಲ್ಲಿ 5 ಬುಲೆಟ್, 13 ಪೊಲೀಸ್ ಜೀಪು, 3 ಮಿನಿ ಬಸ್‌ಗಾಗಿ ಹರಾಜು ನಡೆಯಿತು. ಈ ಎಲ್ಲ ವಾಹನಗಳಿಂದ ್ಙ 7.88 ಲಕ್ಷ  ಸಂಗ್ರಹವಾಗಿದೆ. ಸಾರಿಗೆ ಇಲಾಖೆ ನಿಗದಿಪಡಿಸಿದ ದರಕ್ಕಿಂತ ದುಪ್ಪಟ್ಟು ದರದಲ್ಲಿ ವಾಹನಗಳು ಮಾರಾಟವಾಗಿರುವುದು ವಿಶೇಷ.

ಹರಾಜಿನಲ್ಲಿ ಪಡೆದ ವಾಹನಗಳ ಹಣ ತುಂಬಿಸಿಕೊಂಡು ಒಂದು ವಾರದಲ್ಲಿ ಮಾಲೀಕರಿಗೆ ದಾಖಲೆ ಸಮೇತ ವಾಹನಗಳನ್ನು ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ಶಿವರುದ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.