ADVERTISEMENT

ನಾಯಕನಹಟ್ಟಿ: ಶೀತಕ್ಕೆ 30 ಕುರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 7:27 IST
Last Updated 20 ಫೆಬ್ರುವರಿ 2021, 7:27 IST
ನಾಯಕನಹಟ್ಟಿ ಹೋಬಳಿಯ ಬತ್ತಯ್ಯನಹಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ನಾಯಕನಹಟ್ಟಿ ಹೋಬಳಿಯ ಬತ್ತಯ್ಯನಹಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.   

ನಾಯಕನಹಟ್ಟಿ: ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ಹೋಬಳಿಯ ನೇರಲಗುಂಟೆ ಸಮೀಪದ ಬತ್ತಯ್ಯನಹಟ್ಟಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.

ರೈತ ಮುತ್ತಯ್ಯ 150ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದು, ಗ್ರಾಮದ ಹೊರವಲಯದಲ್ಲಿ ಕುರಿಗಳನ್ನು ಮೇಯಿಸಿಕೊಂಡು ಸಂಜೆ ಮನೆ ಬಳಿಯಿದ್ದ ಕುರಿರೊಪ್ಪದಲ್ಲಿ ಕೂಡಿದ್ದಾರೆ. ಆದರೆ ಸಂಜೆಯ ವೇಳೆ
ಆರಂಭವಾದ ಮಳೆ ರಾತ್ರಿಯಿಡೀ ಧಾರಾಕಾರವಾಗಿ ಸುರಿದಿದ್ದರಿಂದ ಕುರಿಗಳು ಮಳೆಯಲ್ಲಿ ತೊಯ್ದಿವೆ. ಬೆಳಿಗ್ಗೆ ರೊಪ್ಪದ ಬಳಿ ನೋಡಿದಾಗ ಮುವತ್ತಕ್ಕೂ ಹೆಚ್ಚು ಕುರಿಗಳು ಸತ್ತಿವೆ. ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಲಾಯಿತು.

‘ರಾತ್ರಿ ಸುರಿದ ಮಳೆಗೆ ಕುರಿಗಳಿಗೆ ಶೀತವಾಗಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿವೆ’ ಎಂದು ಆಸ್ಪತ್ರೆಯ ಸಿಬ್ಬಂದಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ADVERTISEMENT

ಇನ್ನೂ ಹಲವು ಕುರಿಗಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

‘ಮಳೆಯಿಂದ ನಮ್ಮ ಕುರಿಗಳ ಜೀವ ಹೋಗಿದೆ. ಇವುಗಳಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೇ ಹಲವು ಕುರಿಗಳು ಮೃತಪಟ್ಟಿದ್ದು, ಘಟನೆಯಿಂದ ಮನಸ್ಸಿಗೆ ನೋವುಂಟಾಗಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.