ಮೊಳಕಾಲ್ಮುರು: ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶನಿವಾರ ತಾಲ್ಲೂಕಿನಾದ್ಯಂತ ಸಡಗರದಿಂದ ಆಚರಿಸಿದರು.
ಪಟ್ಟಣದ ಕೆಇಬಿ ವೃತ್ತದಲ್ಲಿರುವ ದರ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿ, ಮುಬಾರಕ್ ಮಸೀದಿ ಹಾಗೂ ದರ್ಗಾ ಮಸೀದಿಗೆ ಸಂಬಂಧಪಟ್ಟವರು ಮತ್ತು ಸರ್ಕಾರಿ ಜ್ಯೂನಿಯರ್ ಕಾಲೇಜು ಹಿಂಭಾಗದ ಮೈದಾನದಲ್ಲಿ ರೆಹಮಾನಿಯಾ ಮತು ಬಿಲಾಲ್ ಮಸೀದಿಗೆ ಸಂಬಂಧಪಟ್ಟವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ಕೋರಿದರು. ಎಲ್ಲಾ ಮಸೀದಿಯವರು ಪೊಲೀಸ್ ಇಲಾಖೆ ನೀಡಿದ್ದ ಸಮಯಕ್ಕೆ ಪ್ರತ್ಯೇಕವಾಗಿ ಬಂದು ಪ್ರಾರ್ಥನೆ ಸಲ್ಲಿಸಿದರು.
ಮುತವಲ್ಲಿಗಳಾದ ದರ್ಗಾದ ಖಾದರ್ ಆಲಿ, ಜಾಮೀಯಾದ ಸೈಯದ್ ನಬೀ, ರಹಮಾನಿಯಾದ ಎಂ. ಆಸೀಫ್ ಉಲ್ಲಾ, ಮೊಬಾರಕ್‌ನ ಸನಾವುಲ್ಲಾ, ಬಿಲಾಲ್‌ನ ಮಹಮದ್ ಒಬೇದುಲ್ಲಾ ಅವರು ಸಾಮೂಹಿಕ ಪ್ರಾರ್ಥನೆ ನೇತೃತ್ವ ವಹಿಸಿದ್ದರು.
ತಾಲ್ಲೂಕಿನ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಊಡೇವು, ಹಾನಗಲ್, ನಾಗಸಮುದ್ರ, ರಾಂಪುರ, ಬೊಮ್ಮಕ್ಕನಹಳ್ಳಿ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.