
ಪ್ರಜಾವಾಣಿ ವಾರ್ತೆ
ಚಳ್ಳಕೆರೆ: ನಗರಸಭೆಗೆ ಐವರನ್ನು ನಾಮ ನಿರ್ದೇಶಕ ಸದಸ್ಯರನ್ನಾಗಿ ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ನಗರದ ನಿವಾಸಿಗಳಾದ ಅರ್.ಪ್ರಸನ್ನ (ನೇತಾಜಿ), ಕೆ.ಎಂ.ನಟರಾಜ, ಆರ್.ವೀರಭದ್ರಪ್ಪ, ಬಿ.ಪಾಪಣ್ಣ, ಡಿ.ಕೆ.ಮಹ್ಮದ್ ಅನ್ವರ್ ಅವರು ನಾಮ ನಿರ್ದೇಶನಗೊಂಡ ಸದಸ್ಯರು.
ಶಾಸಕ ಟಿ.ರಘುಮೂರ್ತಿ ಅವರ ಶಿಫಾರಸಿನ ಮೇರೆಗೆ ಸರ್ಕಾರದ ಮುಂದಿನ ಆದೇಶದವರೆಗೂ ಈ ಐವರು ಸದಸ್ಯರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.