ADVERTISEMENT

ಶಿವಪುರ: ಗಮನ ಸೆಳೆದ ಮಕ್ಕಳ ಸಂತೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:10 IST
Last Updated 9 ಫೆಬ್ರುವರಿ 2026, 8:10 IST
ಹಿರಿಯೂರು ತಾಲ್ಲೂಕಿನ ಶಿವಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ ನಡೆಯಿತು
ಹಿರಿಯೂರು ತಾಲ್ಲೂಕಿನ ಶಿವಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ ನಡೆಯಿತು   

ಹಿರಿಯೂರು: ತಾಲ್ಲೂಕಿನ ಬೀರೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಶಿವಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ ನಡೆಯಿತು.

ಸಂತೆಯಲ್ಲಿ 1 ರಿಂದ 5ನೇ ತರಗತಿಯ 27 ವಿದ್ಯಾರ್ಥಿಗಳು, ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗಣಿತ ವಿಷಯದಲ್ಲಿ ತೂಕ ಮತ್ತು ಗಾತ್ರ, ಲಾಭ ನಷ್ಟ, ಸಂವಹನ, ವ್ಯಾಪಾರದಲ್ಲಿ ಕ್ರಿಯಾಶೀಲತೆ, ಸ್ಥಳೀಯ ಸಂಪನ್ಮೂಲಗಳ ಬಳಕೆ, ಭಾಗವಹಿಸುವಿಕೆ ಮುಂತಾದ ಕಲ್ಪನೆಗಳನ್ನು ಮೂಡಿಸಲು ಮಕ್ಕಳ ಸಂತೆ ಆಯೋಜಿಸಿದ್ದೇವೆ ಎಂದು ಪ್ರಭಾರ ಮುಖ್ಯ ಶಿಕ್ಷಕಿ ಎಂ.ಸಿ. ನಾಗರತ್ನ ತಿಳಿಸಿದರು.

ADVERTISEMENT

‘ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ವಸ್ತುಗಳನ್ನು ಮಾರಲು ತಿಳಿಸುತ್ತೇವೆ. ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಆಟಿಕೆಗಳನ್ನು ಸಿದ್ಧ ಮಾಡಿ ಗೊಂಬೆಗಳು, ವಾಚ್‌ಗಳು, ಕನ್ನಡಕಗಳು, ನ್ಯೂಸ್ ಪೇಪರ್, ಬ್ಯಾಗುಗಳು, ಹೂಗಳು ಮುಂತಾದ ಆಟಿಕೆಗಳನ್ನು ತಯಾರಿಸಿ ಮಾರಲು ತಿಳಿಸುತ್ತೇವೆ. ಮತ್ತೆ ಕೆಲವರಿಗೆ ಸೊಪ್ಪು ಮತ್ತು ತರಕಾರಿಗಳನ್ನು ನಾವೇ ತಂದುಕೊಡುತ್ತೇವೆ. ಮಕ್ಕಳ ಸಂತೆ ಪರಿಕಲ್ಪನೆ ಬಗ್ಗೆ ಸಭೆ ನಡೆಸಿ ಪೋಷಕರಿಗೆ ಮಾಹಿತಿ ನೀಡುತ್ತೇವೆ’ ಎಂದು ಸಹಶಿಕ್ಷಕಿ ಪಿ.ಎಸ್. ಶಿವಕುಮಾರಿ ಹೇಳಿದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ಮಮತಾ ಹಾಗೂ ಪೋಷಕ ಜಯಣ್ಣ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.