ವಾಣಿವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಭರ್ತಿಯಾಗಲು ಸಜ್ಜಾಗಿ ನಿಂತಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಿಂದ 18 ಕಿ.ಮೀ ದೂರಲ್ಲಿರುವ ವಿವಿ ಸಾಗರ ರಾಜ್ಯದ ವಿಶಿಷ್ಟ ಜಲಾಶಯವಾಗಿದೆ. ಇದಕ್ಕೆ ಕ್ರಸ್ಟ್ ಗೇಟ್‌ಗಳಿಲ್ಲ. ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಸಾಗುತ್ತದೆ. ನಂತರ ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಜಲಾಶಯ ಸೇರುತ್ತದೆ. ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿರುವ ಈ ಜಲಾಶಯದ ಸೊಬಗು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.