
ಪ್ರಜಾವಾಣಿ ವಾರ್ತೆ
ಚಳ್ಳಕೆರೆ: ವಡ್ಡೇಪಾಳ್ಯ ಗ್ರಾಮದ ಗುಡಿಬಂಡೆ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಭಾನುವಾರ ಆಂಧ್ರ–ಕರ್ನಾಟಕ ರಾಜ್ಯಗಳ ಭಕ್ತರ ಸಮ್ಮುಖದಲ್ಲಿ ವೀರಾಂಜನೇಯಸ್ವಾಮಿ ಬ್ರಹ್ಮರಥೋತ್ಸವ ಜರುಗಿತು.
ಗುಡಿಕಟ್ಟೆಯ ಭಕ್ತರು ನೂತನ ರಥವನ್ನು ನದಿ ನೀರಿನಿಂದ ಶುಚ್ಛಗೊಳಿಸಿ, ವಿವಿಧ ಹೂವುಗಳಿಂದ ಸಿಂಗರಿಸಿದರು. ಗುಡಿಕಟ್ಟೆಯ ಭಕ್ತರು ರಥಕ್ಕೆ ಬಾಗೀನವನ್ನು ಅರ್ಪಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಹರಕೆ ಕಟ್ಟಿಕೊಂಡ ಭಕ್ತರು ಸೂರು ಬೆಲ್ಲ, ಮೆಣಸು, ಹೂವು, ಬಾಳೆಹಣ್ಣು ರಥದ ಮೇಲೆ ತೂರಿ ಪುನೀತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.