ಮೊಳಕಾಲ್ಮುರು: ತಾಲ್ಲೂಕಿನ ಕೊಮ್ಮನಪಟ್ಟಿಯಲ್ಲಿ ಸ್ಥಳೀಯ ರಾಕರ್ಸ್ ತಂಡದಿಂದ 6 ದಿನಗಳು ಹಮ್ಮಿಕೊಂಡಿದ್ದ ಮೊಳಕಾಲ್ಮುರು ಪ್ರೀಮಿಯರ್ ಲೀಗ್ (ಎಂಪಿಎಲ್) ಟೂರ್ನಿ ಶನಿವಾರ ಮುಕ್ತಾಯಗೊಂಡಿತು.
ಐಪಿಎಲ್ ಮಾದರಿಯಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯಲ್ಲಿ ಮ್ಯಾಸರಹಟ್ಟಿಯ ರಾಯಲ್ ರೇಂಜರ್ಸ್ ಪ್ರಥಮ (₹ 30,000 ಮತ್ತು ಪಾರಿತೋಷಕ), ಹಾನಗಲ್‌ನ ಡ್ರಾಗನ್ ರೈಡರ್ಸ್ ತಂಡ ದ್ವಿತೀಯ (₹ 20,000 ಪಾರಿತೋಷಕ), ತಳವಾರಹಳ್ಳಿಯ ಅಂಜೇವರ್ಸ್ ತಂಡ ತೃತೀಯ (₹ 10,000 ಮತ್ತು ಪಾರಿತೋಷಕ) ಬಹುಮಾನ ಪಡೆದವು.
ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ. ಮಂಜುನಾಥ್ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.