ADVERTISEMENT

ಕೊಯ್ಲಿಗೆ ಬಿಡುವು ನೀಡದ ಮಳೆ: ಆತಂಕ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 7:10 IST
Last Updated 15 ನವೆಂಬರ್ 2021, 7:10 IST
ಚಿಕ್ಕಜಾಜೂರಿನ ಜಮಿನೊಂದರಲ್ಲಿ ಕೊಯಿಲಿಗೆ ಬಂದಿದ್ದ ಮೆಕ್ಕೆಜೋಳ ಮಳೆಯಿಂದಾಗಿ ನೆಲಕ್ಕುರುಳಿರುವುದು.
ಚಿಕ್ಕಜಾಜೂರಿನ ಜಮಿನೊಂದರಲ್ಲಿ ಕೊಯಿಲಿಗೆ ಬಂದಿದ್ದ ಮೆಕ್ಕೆಜೋಳ ಮಳೆಯಿಂದಾಗಿ ನೆಲಕ್ಕುರುಳಿರುವುದು.   

ಚಿಕ್ಕಜಾಜೂರು: ರಾಗಿ, ಮೆಕ್ಕೆಜೋಳ ಕೊಯ್ಲಿಗೆ ಬಂದಿದ್ದರೂ, ಎಡಬಿಡದೆ ಬೀಳುತ್ತಿರುವ ಮಳೆಯಿಂದಾಗಿ ರೈತರಲ್ಲಿ ಆತಂಕ ಎದುರಾಗಿದೆ.

ಚಿಕ್ಕಜಾಜೂರು ಸೇರಿ ಬಿ. ದುರ್ಗ ಹೋಬಳಿಯಾಧ್ಯಂತ ಗುರುವಾರದಿಂದ ನಿರಂತರವಾಗಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಹಾಗೂ ರಾಗಿ ಕೊಯ್ಲು ಮಾಡದ ಸ್ಥಿತಿ ರೈತರದ್ದು. ಕೆಲವು ಹೊಲಗಳಲ್ಲಿ ಬಿದ್ದ ಮೆಕ್ಕೆಜೋಳದ ತೆನೆಗಳು ಮೊಳಕೆ ಒಡೆಯುತ್ತಿವೆ.

ರಾಗಿ ಪೈರು ಹುಲ್ಲಿನ ಚಾಪೆ ಹಾಸಿರುವುದರಿಂದ, ಕೊಯ್ಲಿಗೆ ಕಾರ್ಮಿಕರು ಹೆಚ್ಚು ಕೂಲಿ ಕೇಳುತ್ತಾರೆ.ಮಳೆ ಇನ್ನೂ ಮುಂದುವರಿದರೆ ಈ ವರ್ಷ ರೈತರು ಬಿತ್ತನೆಗೆ ಬೀಜ, ಗೊಬ್ಬರ, ಕೂಲಿಗೆ ನೀಡಿದ ಖರ್ಚೂ ಬಾರದ ಸ್ಥಿತಿ ಬರುತ್ತದೆ ಎಂದು ರೈತರಾದ ಬಸವರಾಜಪ್ಪ, ದಿವಾಕರ್‌, ಲೋಕೇಶ್‌, ಮಲ್ಲಿಕಾರ್ಜುನ, ಶಿವಣ್ಣ, ಬಿ.ಆರ್‌. ಈಶ್ವರಪ್ಪ, ರಾಜಪ್ಪ, ಕಿರಣ್‌ಕುಮಾರ್‌, ಜಯಣ್ಣ ಆತಂಕ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.