ADVERTISEMENT

ಹಿರಿಯೂರು: ವದ್ದೀಗೆರೆ ಸಿದ್ಧೇಶ್ವರಸ್ವಾಮಿ ಹುಂಡಿಯಲ್ಲಿ ₹ 1.25 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:47 IST
Last Updated 25 ಡಿಸೆಂಬರ್ 2025, 7:47 IST
<div class="paragraphs"><p>ಹಣ </p></div>

ಹಣ

   

ಹಣ

ಹಿರಿಯೂರು: ತಾಲ್ಲೂಕಿನ ವದ್ದೀಗೆರೆ ಗ್ರಾಮದ ಸಿದ್ದೇಶ್ವರ(ಕಾಲಭೈರವೇಶ್ವರ) ಸ್ವಾಮಿ ದೇವಾಲಯದ ಹುಂಡಿಯನ್ನು ಬುಧವಾರ ತೆರೆದಿದ್ದು, 1 ಕೋಟಿ 25 ಲಕ್ಷದ 15 ಸಾವಿರದ, 90 ರೂಪಾಯಿ ದೊರೆತಿದೆ.

ADVERTISEMENT

ಚಿತ್ರದುರ್ಗ ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನ್ ಕುರೇಷಿ ನೇತೃತ್ವದಲ್ಲಿ ತಹಶೀಲ್ದಾರ್ ಎಂ. ಸಿದ್ದೇಶ್, ಐಮಂಗಲ ಉಪ ತಹಶೀಲ್ದಾರ್ ಸತೀಶ್ ಕುಮಾರ್, ರಾಜಸ್ವ ನಿರೀಕ್ಷಕ ಜಗದೀಶ್, ಕಾರ್ಯನಿರ್ವಾಹಕ ಅಧಿಕಾರಿ ಕೆ.ಇ. ವೀರಭದ್ರಪ್ಪ, ಯರಬಳ್ಳಿ ಮತ್ತು ಐಮಂಗಲ ಬ್ಯಾಂಕುಗಳ ಸಿಬ್ಬಂದಿ, ರಾಜಸ್ವ ನಿರೀಕ್ಷಕರು, ಕಂದಾಯ ಆಡಳಿತ ಅಧಿಕಾರಿಗಳು, ಗ್ರಾಮದ ಮುಖಂಡರು ಎಣಿಕೆ ಸಮಯದಲ್ಲಿ ಹಾಜರಿದ್ದರು.

ಹುಂಡಿಯಲ್ಲಿ ದೊರೆತ ಹಣವನ್ನು ಐಮಂಗಲ ಗ್ರಾಮದ ಕೆನರಾ ಬ್ಯಾಂಕ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿರುವ ದೇವಸ್ಥಾನದ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.