ADVERTISEMENT

ಹಿರಿಯೂರು | ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ: ನೋಟಿಸ್ ಜಾರಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 7:03 IST
Last Updated 30 ಅಕ್ಟೋಬರ್ 2025, 7:03 IST
ಹಿರಿಯೂರಿನಲ್ಲಿ ಬುಧವಾರ ಅನಧಿಕೃತವಾಗಿ ನಡೆಯುತ್ತಿದ್ದ ಖಾಸಗಿ ಕ್ಲಿನಿಕ್‌ಗಳ ಮೇಲೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ವೈದ್ಯಕೀಯ ಪ್ರಮಾಣ ಪತ್ರಗಳ ಪರಿಶೀಲನೆ ನಡೆಸಲಾಯಿತು 
ಹಿರಿಯೂರಿನಲ್ಲಿ ಬುಧವಾರ ಅನಧಿಕೃತವಾಗಿ ನಡೆಯುತ್ತಿದ್ದ ಖಾಸಗಿ ಕ್ಲಿನಿಕ್‌ಗಳ ಮೇಲೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ವೈದ್ಯಕೀಯ ಪ್ರಮಾಣ ಪತ್ರಗಳ ಪರಿಶೀಲನೆ ನಡೆಸಲಾಯಿತು    

ಹಿರಿಯೂರು: ನಗರದ ವಿವಿಧ ಬಡಾವಣೆಗಳಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಖಾಸಗಿ ಕ್ಲಿನಿಕ್‌ಗಳ ಮೇಲೆ ಬುಧವಾರ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಯಿತು.

ನೋಟಿಸ್ ಜಾರಿ: ನಗರದ ಆಜಾದ್ ಬಡಾವಣೆಯಲ್ಲಿ ಡಾ.ಮುಸ್ತಾಖೀಮ್ ಹಾಗೂ ಡಾ.ಆಯಿಷಾ ನಡೆಸುತ್ತಿರುವ ಮೆಡ್ ಕ್ಯೂರ್ ಕ್ಲಿನಿಕ್, ಬಸವಣ್ಣ ದೇವಸ್ಥಾನದ ರಸ್ತೆಯಲ್ಲಿ ಡಾ.ರೇವಂತ್ ನಡೆಸುತ್ತಿರುವ ಶ್ರೇಷ್ಟಾ ಆಯುರ್ವೇದಿಕ್ ಕ್ಲಿನಿಕ್ ಮತ್ತು ಪಂಚಕರ್ಮ ಕ್ಲಿನಿಕ್, ಹುಳಿಯಾರು ರಸ್ತೆಯಲ್ಲಿ ಡಾ.ನಿಶ್ಚಯ್ ನಡೆಸುತ್ತಿರುವ ಆಶ್ರಯ ಹೆಲ್ತ್ ಕೇರ್ ಸೆಂಟರ್ ಮೇಲೆ ದಾಳಿ ನಡೆಸಿದ ತಂಡ ಕ್ಲಿನಿಕ್ ನಡೆಸಲು ಅಗತ್ಯ ಇರುವ ಪರವಾನಗಿ ಒದಗಿಸುವಂತೆ ನೋಟಿಸ್ ಜಾರಿ ಮಾಡಿತು.

ಬೀಗಮುದ್ರೆ: ತಪಾಸಣಾಧಿಕಾರಿಗಳು ಪರಿಶೀಲನೆಗೆ ಹೋಗಿದ್ದ ಸಮಯದಲ್ಲಿ ಬಾಗಿಲು ಹಾಕಿದ್ದ ಹುಳಿಯಾರು ರಸ್ತೆಯಲ್ಲಿನ ಡಾ.ಮಂಡಲ್ ಅವರ ನಯನ ಕ್ಲಿನಿಕ್‌ಗೆ ಬೀಗಮುದ್ರೆ ಹಾಕಿ, ದಾಖಲೆ ಒದಗಿಸುವಂತೆ ನೋಟಿಸ್ ಜಾರಿ ಮಾಡಲಾಯಿತು.

ADVERTISEMENT

ತಂಡದಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ್, ತಾಲ್ಲೂಕು ಪಂಚಾಯಿತಿ ಇಒ ಡಾ.ಪ್ರಮೋದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಹಾಗೂ ನಗರ ಠಾಣೆ ಎಸ್ಐ ಶಶಿಕಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.