ADVERTISEMENT

ಮಾನವೀಯ ಮೌಲ್ಯಕ್ಕೆ ಮಹನೀಯರೇ ಆದರ್ಶ

ಕನಕದಾಸರ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 7:11 IST
Last Updated 4 ಡಿಸೆಂಬರ್ 2020, 7:11 IST
ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಚಿತ್ರದುರ್ಗದ ಕನಕದಾಸರ ಪುತ್ಥಳಿಗೆ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಪುಷ್ಪನಮನ ಸಲ್ಲಿಸಿದರು. ಕುರುಬ ಸಮುದಾಯದ ಮುಖಂಡರಾದ ಬಿ.ಟಿ.ಜಗದೀಶ್, ಶ್ರೀರಾಮ್ ಇದ್ದರು.
ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಚಿತ್ರದುರ್ಗದ ಕನಕದಾಸರ ಪುತ್ಥಳಿಗೆ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಪುಷ್ಪನಮನ ಸಲ್ಲಿಸಿದರು. ಕುರುಬ ಸಮುದಾಯದ ಮುಖಂಡರಾದ ಬಿ.ಟಿ.ಜಗದೀಶ್, ಶ್ರೀರಾಮ್ ಇದ್ದರು.   

ಚಿತ್ರದುರ್ಗ: ‘ಮಾನವೀಯ ಮೌಲ್ಯವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕನಕದಾಸರು ಸೇರಿ ಅನೇಕ ಮಹನೀಯರ ಆದರ್ಶ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಸರಳವಾಗಿ ಆಯೋಜಿಸಿದ್ದ ‘ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ’ದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ನೆಮ್ಮದಿಯ ಬದುಕು ಕಾಣಬೇಕು. ಸರಳ ರೀತಿಯಲ್ಲಿ ಜೀವನ ಸಾಗಿಸಬೇಕು. ದೇಶದ ಒಳಿತಿಗಾಗಿ ಶ್ರಮಿಸಬೇಕು. ಇವೆಲ್ಲವೂ ಸಾಧ್ಯವಾಗಬೇಕಾದರೆ, ಕನಕದಾಸರು ಸೇರಿದಂತೆ ರಾಷ್ಟ್ರದ ಮಹಾನ್ ವ್ಯಕ್ತಿಗಳು ಬಿತ್ತಿದ ತತ್ವಾದರ್ಶ ಪಾಲಿಸಬೇಕು’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಟಿ.ಯೋಗೇಶ, ‘ಕನಕದಾಸರು ಭಕ್ತಿ ಪರಂಪರೆ ಆರಾಧನೆಯ ಹಿನ್ನೆಲೆಯಲ್ಲಿ ಬಂದವರಾದರೂ ಅವರ ತತ್ವ, ಸಾಹಿತ್ಯದಲ್ಲಿ ಸಮಾಜಿಕ ಕಳಕಳಿ ಇದೆ’ ಎಂದು ಹೇಳಿದರು.

‘ಕನಕದಾಸರು ಒಂದು ಶಕ್ತಿಯಾಗಿ ನಾಡನ್ನು ಸುತ್ತಿ ತತ್ವ, ಸಂದೇಶ, ದೈವಭಕ್ತಿ ಸಾರುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ಹೀಗಾಗಿ ಅವರು ಒಂದು ವಿಶ್ವಕೋಶವಿದ್ದಂತೆ’ ಎಂದು ಬಣ್ಣಿಸಿದರು.

ಉಪವಿಭಾಗಾಧಿಕಾರಿ ಪ್ರಸನ್ನ, ಡಿಡಿಪಿಐ ರವಿಶಂಕರ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಸದಾಶಿವ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.