
ಚಿತ್ರದುರ್ಗ: ಮಹಾರಾಷ್ಟ್ರ ಕೊಲ್ಹಾಪುರದ ಎಸಿಬಿ ಡಿವೈಎಸ್‌ಪಿ ವೈಷ್ಣವಿ ಸುರೇಶ್ ಪಾಟೀಲ್ ಅವರಿದ್ದ ಇನ್ನೋವಾ ಕಾರು ಮತ್ತು ಲಾರಿ ನಡುವೆ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ನಗರ ಹೊರವಲಯದ ತಮಟಕಲ್ಲು ಬಳಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಬಳಿ ಭಾನುವಾರ ಮುಂಜಾನೆ ಡಿಕ್ಕಿ ಸಂಭವಿಸಿದೆ. ವೈಷ್ಣವಿ ಅವರ ತಾಯಿ ಕಮಲಾ ಹರಿಬಾಬು (69), ಚಾಲಕ ರಾಕೇಶ್ (39) ಮೃತಪಟ್ಟರು.
ವೈಷ್ಣವಿ, ಅವರ ಸಂಬಂಧಿ ಕುಸುಮಾ ಪಾಟೀಲ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ದತ್ತಾತ್ರೇಯ ಪಾಟೀಲ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈಷ್ಣವಿ ಅವರು ಕುಟುಂಬದ ಜೊತೆ ತಮಿಳುನಾಡು ಪ್ರವಾಸ ಮುಗಿಸಿ, ಕೊಲ್ಹಾಪುರಕ್ಕೆ ಮರಳುವಾಗ ಅವಘಡ ಸಂಭವಿಸಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.