ADVERTISEMENT

ಜಾತಿ ಕಾಲಂನಲ್ಲಿ ಕುರುಬ ಎಂದೇ ಬರೆಯಿಸಿ: ಎಂ.ಶಿವಲಿಂಗಪ್ಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:17 IST
Last Updated 25 ಸೆಪ್ಟೆಂಬರ್ 2025, 5:17 IST
ಚಳ್ಳಕೆರೆ ನಗರದ ಕಂಬಳಿ ಮಾರುಕಟ್ಟೆಯಲ್ಲಿ ಕುರುಬ ಸಮುದಾಯದ ಪದಾಧಿಕಾರಿಗಳು ಬುಧವಾರ ಕರಪತ್ರ ಪ್ರದರ್ಶಿಸಿದರು
ಚಳ್ಳಕೆರೆ ನಗರದ ಕಂಬಳಿ ಮಾರುಕಟ್ಟೆಯಲ್ಲಿ ಕುರುಬ ಸಮುದಾಯದ ಪದಾಧಿಕಾರಿಗಳು ಬುಧವಾರ ಕರಪತ್ರ ಪ್ರದರ್ಶಿಸಿದರು   

ಚಳ್ಳಕೆರೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ–ಉಪಜಾತಿ ಹಾಗೂ ಆಯ್ಕೆ ಜಾತಿ ಕಾಲಂನಲ್ಲಿ ಕುರುಬ ಎಂದೇ ಬರೆಯಿಸಲು ಕುರುಬ ಸಮುದಾಯಕ್ಕೆ ಸಲಹೆ ನೀಡಬೇಕು ಎಂದು ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಶಿವಲಿಂಗಪ್ಪ ಮುಖಂಡರಲ್ಲಿ ಮನವಿ ಮಾಡಿದರು.

ನಗರದ ಕಂಬಳಿ ಮಾರುಕಟ್ಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಕುರುಬ ಸಮುದಾಯದ ಜನರು ವಾಸವಿರುವ ಗ್ರಾಮದ ಪ್ರತಿ ಮನೆಮನೆಗೆ ಕರಪತ್ರ ಹಂಚುವ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.

ADVERTISEMENT

ಮುಂದಿನ ದಿನಗಳಲ್ಲಿ ಸರ್ಕಾರದ ಮೀಸಲು ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ಉಪಾಧ್ಯಕ್ಷ ಕಂದಿಕೆರೆ ಸುರೇಶ್ ಬಾಬು ಹೇಳಿದರು. 

ನಿರ್ದೇಶಕ ಅಜ್ಜಪ್ಪ, ನೌಕರರ ಸಂಘದ ಅಧ್ಯಕ್ಷ ರಾಜು, ಗಂಗಾಧರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.