ಹಿರಿಯೂರು: ಆದಿವಾಲ ಗ್ರಾಮ ಪಂಚಾಯಿತಿಯಲ್ಲಿ ಕಿರಿದಾದ ಕೋಣೆಯಂತಹ ಅಂಗಡಿ ಮಳಿಗೆಯಲ್ಲಿ ಇದ್ದ ಗ್ರಂಥಾಲಯವನ್ನು ಸೋಮವಾರ ಗ್ರಾಮದಲ್ಲಿಯೇ ಇರುವ ಮಹಿಳಾ ಭವನಕ್ಕೆ ಸ್ಥಳಾಂತರಿಸಲಾಯಿತು.
ಗ್ರಾಮದ ಗ್ರಂಥಾಲಯದ ದುಃಸ್ಥಿತಿ ಬಗ್ಗೆ ಜುಲೈ 6ರಂದು ‘ಪ್ರಜಾವಾಣಿ’ಯಲ್ಲಿ ‘ರಾಶಿರಾಶಿ ಪುಸ್ತಕ ಜೋಡಿಲು ಕಪಾಟುಗಳಿಲ್ಲ’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ವರದಿಗೆ ಸ್ಪಂದಿಸಿದ ಆದಿವಾಲ ಗ್ರಾಮ ಪಂಚಾಯಿತಿ ಪಿಡಿಒ ಜ್ಯೋತಿ ವೈಜನಾಥ್ ಈ ಕ್ರಮ ಕೈಗೊಂಡಿದ್ದಾರೆ.
ಮಹಿಳಾ ಭವನದಲ್ಲಿ 10ರಿಂದ 15 ಜನ ಕುಳಿತು ಪುಸ್ತಕ, ಪತ್ರಿಕೆಗಳನ್ನು ಓದಬಹುದಾಗಿದೆ.
‘ಇದಿಷ್ಟೇ ಸಾಲದು ಪುಸ್ತಕಗಳನ್ನು ಜೋಪಾನವಾಗಿ ಇಡುವ ವ್ಯವಸ್ಥೆ, ಆಸನಗಳು, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕು. ಗ್ರಂಥಾಲಯ ಜನಸ್ನೇಹಿಯಾಗಿದ್ದರೆ ಮಾತ್ರ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.