ADVERTISEMENT

ನಾಯಕನಹಟ್ಟಿ | ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:57 IST
Last Updated 30 ಜನವರಿ 2026, 4:57 IST
ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಲಿಹಾರಿಕ ಆರ್.ದೇವರಮನೆ.
ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಲಿಹಾರಿಕ ಆರ್.ದೇವರಮನೆ.   

ನಾಯಕನಹಟ್ಟಿ: ಪಟ್ಟಣದ ವಿದ್ಯಾವಿಕಾಸ ಶಾಲೆಯ ಯುಕೆಜಿ ತರಗತಿ ವಿದ್ಯಾರ್ಥಿನಿ ಲಿಹಾರಿಕಾ ಆರ್.ದೇವರಮನೆ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ.

6 ವರ್ಷದ ಬಾಲಕಿ ಲಿಹಾರಿಕಾ ಕೇವಲ 33 ಸೆಕೆಂಡ್‌ಗಳಲ್ಲಿ ದೇಶದ ಎಲ್ಲ ರಾಜ್ಯಗಳ ಹೆಸರುಗಳನ್ನು ಹೇಳುವುದರಲ್ಲಿ ಮತ್ತು ಗೋಲಿಗಳ ಬೌದ್ಧಿಕ ಕಸರತ್ತಿನ ಆಟ ಆಡುವಲ್ಲಿ ಪರಿಣತಿ ಸಾಧಿಸಿರುವ ಕಾರಣ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ.

ಬೈನ್‌ವಿಟಾ ಎಂಬುದು ರಂದ್ರಗಳಿರುವ ಬೋರ್ಡ್‌ನಲ್ಲಿ ಗೋಲಿಗಳನ್ನು ಬಳಸಿ ಆಡುವ ಏಕ ವ್ಯಕ್ತಿ ಆಟವಾಗಿದೆ. ಒಂದು ಗೋಲಿಯು ಇನ್ನೊಂದು ಗೋಲಿಯ ಮೇಲೆ ಹಾರಿ ಆ ಗೋಲಿಯನ್ನು ಬೋರ್ಡ್‌ನಿಂದ ತೆಗೆದುಹಾಕುವ ಆಟವಾಗಿದೆ. ಬೋರ್ಡ್‌ನಲ್ಲಿ ಒಂದೇ ಗೋಲಿಯನ್ನು ಉಳಿಸುವ ಅತ್ಯಂತ ವೇಗವಾಗಿ ಕಡಿಮೆ ಅವಧಿಯಲ್ಲಿ ಈ ಆಟವನ್ನು ಆಡಬೇಕಾಗಿದೆ. ಇಂತಹ ಆಟದ ಜೊತೆಗೆ ಬಾಲಕಿ ಲಿಹಾರಿಕ ದೇಶದ ಎಲ್ಲ ರಾಜ್ಯಗಳ ಹೆಸರುಗಳನ್ನು 33 ಸೆಕೆಂಡ್‌ಗಳಲ್ಲಿ ಹೇಳುತ್ತಾಳೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.