
ಪ್ರಜಾವಾಣಿ ವಾರ್ತೆ
ಸಾವು–ಸಾಂದರ್ಭಿಕ ಚಿತ್ರ
ಧರ್ಮಪುರ: ಸಮೀಪದ ಹರಿಯಬ್ಬೆ ಭಾರತ ಮಾತಾ ಶಾಲೆಯ ಬಳಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಯಾದಗಿರಿ ಜಿಲ್ಲೆಯ ಚಿಂಚೋಳಿ ಗ್ರಾಮದ ಪ್ರಭು (45) ಮೃತರು. ಅವರು ಹರಿಯಬ್ಬೆಯಿಂದ ಧರ್ಮಪುರಕ್ಕೆ ಬರುತ್ತಿದ್ದು, ಲಾರಿ ಧರ್ಮಪುರದಿಂದ ಹಿರಿಯೂರು ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಪ್ರಭು ಅವರು ಮೂರು ತಿಂಗಳಿನಿಂದ ಹರಿಯಬ್ಬೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.
ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.